ಬಿಷಪ್‌ರಿಂದ ಅತ್ಯಾಚಾರ ಪ್ರಕರಣ: ವ್ಯಾಟಿಕನ್‌ಗೆ ಪತ್ರ ಬರೆದ ಕೇರಳದ ಕ್ರೈಸ್ತ ಸನ್ಯಾಸಿನಿ

Update: 2018-09-11 15:00 GMT

ಕೊಚ್ಚಿ, ಸೆ.11: ತನ್ನ ಮೇಲೆ ಬಿಷಪ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದ ಕೇರಳದ ಕ್ರೈಸ್ತ ಸನ್ಯಾಸಿನಿ, ಇದೀಗ ನ್ಯಾಯಕ್ಕೆ ಆಗ್ರಹಿಸಿ ವ್ಯಾಟಿಕನ್‌ಗೆ ಪತ್ರ ಬರೆದಿದ್ದಾರೆ. ಪೋಪ್‌ರವರ ರಾಯಭಾರಿಯಾಗಿರುವ, ಭಾರತದ ಅಪೊಸ್ಟೊಲಿಕ್ ನನ್ಸಿಯೊ(ಕ್ರೈಸ್ತ ಮತ ಸಂಬಂಧಿ ಕಚೇರಿ)ದ ಗ್ಯಾಂಬ್ಯಟಿಸ್ಟಾ ಡಿಕ್ವೆಟ್ರೋಗೆ ಸೆ.8ರಂದು ಪತ್ರ ಬರೆದಿರುವ ಸನ್ಯಾಸಿನಿ, ಈ ಪ್ರಕರಣದಲ್ಲಿ ನ್ಯಾಯಬೇಡಿ ತಾನು ಯಾರನ್ನೆಲ್ಲಾ ಸಂಪರ್ಕಿಸಿದ್ದೇನೆ ಎಂದು ವಿವರಿಸಿದ್ದಾರೆ.

ಎಳೆಯ ಪ್ರಾಯದಿಂದಲೇ ಚರ್ಚ್ ನಮ್ಮ ತಾಯಿಯೆಂಬ ನಂಬಿಕೆಯನ್ನು ನಮ್ಮಲ್ಲಿ ಬೆಳೆಸಲಾಗುತ್ತದೆ. ಆದರೆ ನನಗಾದ ಅನುಭವದಿಂದ ಚರ್ಚ್ ಎಂಬುದು ಮಹಿಳೆಯರು ಮತ್ತು ಜನಸಾಮಾನ್ಯರಿಗೆ ಮಲತಾಯಿಯಾಗಿದೆ ಎಂಬ ಭಾವನೆ ಮೂಡಲಾರಂಭಿಸಿದೆ ಎಂದು ಪತ್ರದಲ್ಲಿ ತಿಳಿಸಿರುವ ಅವರು, ಅತ್ಯಾಚಾರ ಪ್ರಕರಣದ ಸಂತ್ರಸ್ತೆಯಾಗಿ ತಾನು ಈ ಪತ್ರ ಬರೆದಿರುವುದಾಗಿ ಹೇಳಿದ್ದಾರೆ. ಬಿಷಪ್ ಫ್ರಾಂಕೊ ತನ್ನ ಸ್ಥಾನಮಾನ ಬಳಸಿಕೊಂಡು ಹಲವು ಬಾರಿ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಕೇರಳ ಹೈಕೋರ್ಟ್‌ಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News