ಆಸ್ಟ್ರೇಲಿಯ ‘ಎ’ ವಿರುದ್ಧ ಭಾರತಕ್ಕೆ ಗೆಲುವು

Update: 2018-09-11 18:37 GMT

ಬೆಂಗಳೂರು, ಸೆ.11: ಎರಡನೇ ಟೆಸ್ಟ್‌ನ ಅಂತಿಮ ದಿನವಾದ ಮಂಗಳವಾರ ಆಸ್ಟ್ರೇಲಿಯ ‘ಎ’ ವಿರುದ್ಧ 6 ವಿಕೆಟ್‌ಗಳಿಂದ ಜಯ ಸಾಧಿಸಿದ ಭಾರತ ಎ ತಂಡ 2 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.

 4ನೇ ದಿನವಾದ ಮಂಗಳವಾರ 2 ವಿಕೆಟ್‌ಗಳ ನಷ್ಟಕ್ಕೆ 38 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ 213 ರನ್‌ಗೆ ಆಲೌಟಾಯಿತು. ಮೊದಲ ಇನಿಂಗ್ಸ್‌ನಲ್ಲಿ 159 ರನ್ ಹಿನ್ನಡೆ ಅನುಭವಿಸಿದ್ದ ಆಸ್ಟ್ರೇಲಿಯ ತಂಡ ಪಂದ್ಯ ಕೊನೆಗೊಳ್ಳಲು 45 ನಿಮಿಷ ಬಾಕಿ ಇರುವಾಗ ಭಾರತದ ಗೆಲುವಿಗೆ 55 ರನ್ ಸುಲಭ ಸವಾಲು ನೀಡಿತು. ಗೆಲ್ಲಲು ಸುಲಭ ಸವಾಲು ಪಡೆದ ಭಾರತ ಅಂಕಿತ್ ಭಾವ್ನೆ(ಔಟಾಗದೆ 28)ನೆರವಿನಿಂದ 35 ನಿಮಿಷಗಳಲ್ಲಿ 6.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿ ಗೆಲುವಿನ ದಡ ಸೇರಿತು. ಆಸ್ಟ್ರೇಲಿಯದ ಪರ 2ನೇ ಇನಿಂಗ್ಸ್‌ನಲ್ಲಿ ಹ್ಯಾಂಡ್ಸ್‌ಕಾಂಬ್(56)ಸರ್ವಾಧಿಕ ಸ್ಕೋರ್ ಗಳಿಸಿದರು. ಟ್ರೆವಿಸ್ ಹೆಡ್(47), ನಾಯಕ ಮಿಚೆಲ್ ಮಾರ್ಷ್(36) ಎರಡಂಕೆಯ ಸ್ಕೋರ್ ಗಳಿಸಿದರು. ಭಾರತದ ಕೆ.ಗೌತಮ್(3-39), ಕುಲ್‌ದೀಪ್ ಯಾದವ್(3-46) ತಲಾ 3 ವಿಕೆಟ್‌ಗಳನ್ನು ಪಡೆದರೆ, ಚಹಾರ್(2-30) ಹಾಗೂ ನದೀಂ(2-67)ತಲಾ2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News