ಮಾಧ್ಯಮಗಳಲ್ಲಿ ಊಹಾಪೋಹ ಸುದ್ದಿ: ಡಾ.ಜಿ. ಪರಮೇಶ್ವರ್

Update: 2018-09-13 08:40 GMT

ಬೆಂಗಳೂರು, ಸೆ.13: ಜಾರಕಿಹೊಳಿ ಸಹೋದರರು ಸರಕಾರ ಅಸ್ಥಿರಗೊಳಿಸಲ್ಲ ಎಂದಿದ್ದರೂ, ಮಾಧ್ಯಮಗಳಲ್ಲಿ ಉದ್ದೇಶ ಪೂರಕವಾಗಿ ಊಹಾಪೋಹ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಗುರುವಾರ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ಇಂದು ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜಾರಕಿಹೊಳಿ ಸಹೋದರರಿಗೆ ಅಸಮಧಾನ ಇದ್ದರೆ ನಮ್ಮ ಮುಂದೆ ಹೇಳಿಕೊಳ್ಳಬಹುದಿತ್ತು. ಅಲ್ಲದೆ,  ಸಚಿವ ಡಿ.ಕೆ. ಶಿವಕುಮಾರ್ ಬೆಳಗಾವಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅವರ ಇಲಾಖೆಯ ಕೆಲಸಗಳನ್ನು ಮಾಡಿರಬಹುದು. ಡಿ.ಕೆ. ಶಿವಕುಮಾರ್ ಹಸ್ತ ಕ್ಷೇಪ ಇದ್ದಿದ್ದೇ ಆದರೆ, ಚರ್ಚೆ ಮಾಡಿ ಸರಿ ಮಾಡುತ್ತೇವೆ ಎಂದು ಹೇಳಿದರು.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಲು ಬಂದಿದ್ದೆ. ದೇವೇಗೌಡರ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಮಾಧ್ಯಮಗಳಲ್ಲಿ ಊಹಾಪೋಹದ ಸುದ್ದಿಗಳು ಬರುತ್ತಿರುವ ರೀತಿ ಹಾಗೇನೂ ಇಲ್ಲ ಎಂದರು. 

ಇದೆಲ್ಲ ಪಕ್ಷದ ಆಂತರಿಕ ವಿಚಾರ. ಎಲ್ಲವನ್ನು  ಪರಿಹಾರ ಮಾಡೋಣ. ಅಂತಹ ಸಮಸ್ಯೆ ಇದ್ದರೆ ಪಕ್ಷದ ವೇದಿಕೆಯಲ್ಲಿ ಸರಿಪಡಿಸುತ್ತೇವೆ. ಶಾಸಕರ ಕ್ಷೇತ್ರಕ್ಕೆ ಅನುದಾನ ತಡ ಆಗಿರಬಹುದು. ಅದನ್ನು ಸರಿಪಡಿಸುತ್ತೇವೆ. ಶೀಘ್ರವಾಗಿ ಸರ್ಕಾರ ಸ್ಪಂದಿಸುತ್ತದೆ. ಅದರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.

ನಮ್ಮ ಶಾಸಕರ ಕ್ಷೇತ್ರಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಹಾಗಾಗಿ ಶಾಸಕರಿಗೆ ಬೇಸರ ಇರಬಹುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News