ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಬಹು ಕೋಟಿ‌ ಸಂಪತ್ತು ಪತ್ತೆ ಪ್ರಕರಣ: ಇಡಿ ಗೆ ವರ್ಗಾವಣೆ

Update: 2018-09-13 10:26 GMT

ಬೆಂಗಳೂರು, ಸೆ.13: ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಲಾಕರ್​ಗಳಲ್ಲಿ ಬಹುಕೋಟಿ ಸಂಪತ್ತು ಪತ್ತೆ ಪ್ರಕರಣವನ್ನು ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ವರ್ಗಾಯಿಸಿದ್ದಾರೆ ಎಂದು ವರದಿಯಾಗಿದೆ.

ಜುಲೈ 20 ರಂದು ಬೆಂಗಳೂರಿನ ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಲಾಕರ್​ನಲ್ಲಿ ದಾಖಲೆ ಇಲ್ಲದ ಹಣ, ದಾಖಲೆ ಪತ್ರಗಳು ಪತ್ತೆಯಾಗಿದ್ದವು. ಬಳಿಕ ಆಡಳಿತ ಮಂಡಳಿ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿತ್ತು.

ಆದರೆ ಲಾಕರ್​ನಲ್ಲಿ ದಾಖಲೆ ಇಲ್ಲದ ಭಾರಿ ಹಣ ಪತ್ತೆಯಾ‌ಗಿದ್ದರಿಂದ ಪೊಲೀಸರು ಐಟಿಗೆ ಮಾಹಿತಿ ನೀಡಿದ್ದರು. ಇದೀಗ ಐಟಿ ಇಲಾಖೆಯೂ, ಪ್ರಕರಣವನ್ನು ಇ.ಡಿ. ಗೆ ವರ್ಗಾಯಿಸಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News