ಭೀಮ್ ಆರ್ಮಿ ಸಂಘಟನೆಯ ಸಂಸ್ಥಾಪಕ ಚಂದ್ರಶೇಖರ್ ಜೈಲಿನಿಂದ ಬಿಡುಗಡೆ

Update: 2018-09-14 04:56 GMT

ಲಕ್ನೋ, ಸೆ. 14: ಭೀಮ್ ಆರ್ಮಿ ಸಂಘಟನೆಯ ಸಂಸ್ಥಾಪಕ ಚಂದ್ರಶೇಖರ್ ಅಝಾದ್ ಅಲಿಯಾಸ್ ರಾವಣ ನನ್ನು ಶುಕ್ರವಾರ ಬೆಳಗ್ಗಿನ ಜಾವ ಸಹರಾನ್ಪುರ್ ಜೈಲಿನಿಂದ  ಬಿಡುಗಡೆ ಮಾಡಲಾಗಿದೆ.

ಚಂದ್ರಶೇಖರ್  ಬಿಡುಗಡೆ ಮಾಡುವ ನಿರ್ಧಾರವನ್ನು ಆದಿತ್ಯನಾಥ್ ಸರಕಾರ  ಗುರುವಾರ ಪ್ರಕಟಿಸಿತ್ತು. ದಲಿತರ ಮೇಲಿನ ದೌರ್ಜನ್ಯ ವಿರುದ್ಧ ಸಹರಣಪುರ ಹಿಂಸೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅನ್ವಯ  ಪ್ರಕರಣ ದಾಖಲಿಸಿಕೊಂಡು  ಬಂಧಿಸಿ  ಒಂದು ವರ್ಷದಿಂದ ಜೈಲಿನಲ್ಲಿಡಲಾಗಿತ್ತು. 

2017ರ ಜೂನ್‌ನಿಂದ ಜೈಲಿನಲ್ಲಿರುವ  ಚಂದ್ರಶೇಖರ್  ಜೈಲು ಸಜೆ ಅವಧಿ ಅಕ್ಟೋಬರ್ 31ಕ್ಕೆ ಮುಗಿಯಲಿತ್ತು. ಆದರೆ ಇದೀಗ ಅವಧಿ ಮುಗಿಯುವ ಮೊದಲೇ ಬಿಡುಗಡೆಮಾಡಲಾಗಿದೆ.  ಚಂದ್ರಶೇಖರ್ ಜೈಲಿನಿಂದ ಹೊರಬರುತ್ತಿದಂತೆ ಸಹಸ್ರಾರು ಮಂದಿ ಬೆಂಬಲಿಗರು ಆತನನ್ನು ಸ್ವಾಗತಿಸಿದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News