ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ದೇಣಿಗೆ

Update: 2018-09-14 15:01 GMT

ಬೆಂಗಳೂರು, ಸೆ.14: ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ವತಿಯಿಂದ ಕೊಡಗು ಪ್ರವಾಹ ಸಂತ್ರಸ್ತರಿಗೆ 1 ಕೋಟಿ ರೂ.ಗಳನ್ನು ಹಾಗೂ ನಿಗಮದ ಉದ್ಯೋಗಿಗಳ ಒಂದು ದಿನದ ವೇತನ ರೂ.1,01,01,821/-ರೂ.ಗಳ ಚೆಕ್‍ನ್ನು ಇಂದು ಮುಖ್ಯಮಂತ್ರಿಗಳಿಗೆ ನೀಡಲಾಯಿತು. 

ದೇಣಿಗೆಯ ಚೆಕ್ ಗಳನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಕುಮಾರ ನಾಯಕ್ ನೀಡಿದರು. ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಕೆಪಿಸಿಎಲ್‍ನ ಹಣಕಾಸು ನಿರ್ದೇಶಕ ಆರ್. ನಾಗರಾಜ ಮತ್ತು ಮಂಡಳಿಯ ನಿರ್ದೇಶಕರುಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. 

ಇದೇ ವೇಳೆ ಎಲ್ ಅಂಡ್ ಟಿ ವತಿಯಿಂದ 5.46 ಕೋಟಿ ರೂ.ಗಳ ಚೆಕ್, ತಾವರೆಕೆರೆಯ ವಿಶಾಲ್ ಎಜುಕೇಷನ್ ಸೊಸೈಟಿ ಶಾಲಾ ಮಕ್ಕಳ ವತಿಯಿಂದ 1 ಲಕ್ಷ ರೂ.ಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದಲೂ 2 ಕೋಟಿ ರೂ.ಗಳ ಚೆಕ್‍ನ್ನು ಮುಖ್ಯಮಂತ್ರಿಗಳಿಗೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News