×
Ad

ಬೆಂಗಳೂರು: ಯುವಕನನ್ನು ಅಪಹರಿಸಿದ ಯುವತಿ ಸೇರಿ ಐವರ ಬಂಧನ

Update: 2018-09-15 22:09 IST

ಬೆಂಗಳೂರು, ಸೆ.15: ಯುವಕನನ್ನು ಅಪಹರಿಸಿದ ಆರೋಪದ ಪ್ರಕರಣ ಸಂಬಂಧ ಯುವತಿ ಸೇರಿದಂತೆ ಐದು ಜನರನ್ನು ಇಲ್ಲಿನ ನಂದಿನಿ ಲೇಔಟ್ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ನಗರದ ಹೆಬ್ಬಾಳ ನಿವಾಸಿ ಲಿಖಿತಾ ಬಂಧಿತ ಯುವತಿ ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಮಳ ನಗರದ ನಿವಾಸಿ ಆಗಿರುವ ರಘು ಎಂಬಾತ ಗೆಳೆಯರ ದಿನಾಚರಣೆ ದಿನದಂದು ಶುಭಾಷಯ ಕೋರಿ ಎಸ್‌ಎಂಎಸ ಕಳುಹಿಸಿದ್ದ. ಬಳಿಕ ಇದಕ್ಕೆ ಕರೆ ಮಾಡಿ ಲಿಖಿತಾ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಸಹೋದರ ಲೋಹಿತ್, ಸ್ನೇಹಿತ ರೋಹಿತ್ ಬಂಡೆ ಸೇರಿದಂತೆ ಐವರೊಂದಿಗೆ ರಘು ಮನೆಗೆ ನುಗ್ಗಿ ಬಾಯಿಗೆ ಬಟ್ಟೆಯಿಂದ ಕಟ್ಟಿ ಹಾಕಿ, ಗಂಭೀರವಾಗಿ ಹಲ್ಲೆ ನಡೆಸಿ ಕಾರಿನಲ್ಲಿ ಅಪಹರಣ ಮಾಡಿದ್ದರು. ಈ ಸಂಬಂಧ ರಘು ಪೋಷಕರು ನಂದಿನಿ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಲಿಖಿತಾ ಸೇರಿ ಐದು ಜನರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News