×
Ad

ಮನೆಗೆ ನುಗ್ಗಿ ಚಿನ್ನಾಭರಣ ಕಳವು: ಮೂವರ ಸೆರೆ

Update: 2018-09-15 22:19 IST

ಬೆಂಗಳೂರು, ಸೆ.15: ಹಾಡಹಗಲೇ ಮನೆಯೊಂದಕ್ಕೆ ನುಗ್ಗಿ ಮನೆಯವರನ್ನು ಕಟ್ಟಿಹಾಕಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಇಲ್ಲಿನ ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ಪುಟ್ಟರಾಜಪ್ಪ ಬ್ಲಾಕ್ ಕೆರೆಕೋಡಿ ರಸ್ತೆ ನಿವಾಸಿ ರಂಜಿತ್ (25), ಯಲಹಂಕದ ರೈತರ ಸಂತೆ ಹತ್ತಿರದ ಅಯ್ಯಪ್ಪ ಟೆಂಪಲ್ ಬಳಿ ನಿವಾಸಿ ರೋಹಿತ್ (25) ಹಾಗೂ ಯಲಹಂಕ ಉಪನಗರ ರಾಮಭಜನೆ ಮಂದಿರದ ಹತ್ತಿರದ ನಿವಾಸಿ ಸುಮಂತ್ (19) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 1.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2 ಮೊಬೈಲ್, 3 ವಾಚ್‌ಗಳು ಮತ್ತು ಕೃತ್ಯಕ್ಕೆ ಬಳಸಿದ್ದ 5 ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News