ಕಡ್ಡಾಯ ವರ್ಗಾವಣೆ ಅಧಿಸೂಚನೆಗೆ ಆಕ್ಷೇಪ

Update: 2018-09-15 16:50 GMT

ಬೆಂಗಳೂರು, ಸೆ.15: ಒಂದೇ ವಲಯದಲ್ಲಿ 15 ವರ್ಷಗಳಿಗೂ ಅಧಿಕ ಕಾಲ ಸರಕಾರಿ ಪದವಿ ಕಾಲೇಜು ಉಪನ್ಯಾಸಕರಿಗೆ ಕಡ್ಡಾಯ ವರ್ಗಾವಣೆ ಅಧಿಸೂಚನೆಯನ್ನು ವಿರೋಧಿಸಿ 500ಕ್ಕೂ ಅಧಿಕ ಆಕ್ಷೇಪಣೆಗಳು ಕಾಲೇಜು ಶಿಕ್ಷಣ ಇಲಾಖೆಗೆ ಬಂದಿದೆ.

ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ, ಸುಮಾರು 300 ವರ್ಗಾವಣೆಗೆ ಅರ್ಹವಾಗುವ ಉಪನ್ಯಾಸಕರು ಇದ್ದರೂ ಎಲ್ಲ 500 ಆಕ್ಷೇಪ ಅರ್ಜಿಗಳು 50ರಿಂದ 60 ಸಿಬ್ಬಂದಿ ಸದಸ್ಯರು ಬರೆದಿದ್ದಾರೆ. ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ವರ್ಗಾವಣೆ ಮಾಡುವುದನ್ನು ವಿರೋಧಿಸಿ ಅರ್ಜಿ ಸಲ್ಲಿಸಿದ್ದಾರೆ.

ಇದು ವರ್ಗಾವಣೆ ಪ್ರಕ್ರಿಯೆಯನ್ನು ತಡೆಯಲು ಉಪನ್ಯಾಸಕರು ನಡೆಸುವ ಲಾಬಿ ಎಂದು ಗೊತ್ತಾಗುತ್ತದೆ ಎಂದು ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ವರ್ಗಾವಣೆ ಪ್ರಕ್ರಿಯೆಗೆ ಮುಂದಿನ ಚಾಲನೆ ನೀಡಬೇಕಾದರೆ ಸರಕಾರ ಒಪ್ಪಿಗೆ ನೀಡಬೇಕೆಂದು ಇಲಾಖೆ ಸರಕಾರಕ್ಕೆ ಆಕ್ಷೇಪ ಅರ್ಜಿಯನ್ನು ಕಳುಹಿಸಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News