ಏಷ್ಯಾ ಕಪ್: ಶ್ರೀಲಂಕಾ ವಿರುದ್ಧ ಬಾಂಗ್ಲಾಕ್ಕೆ ಭರ್ಜರಿ ಜಯ

Update: 2018-09-16 03:35 GMT

ದುಬೈ, ಸೆ.16: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಗಮನ ಸೆಳೆದ ಬಾಂಗ್ಲಾದೇಶ ತಂಡ ಬಲಿಷ್ಠ ಶ್ರೀಲಂಕಾ ವಿರುದ್ಧ 137 ರನ್ನುಗಳ ಸುಲಭ ಜಯ ದಾಖಲಿಸಿದೆ.

ಇಷ್ಟಾಗಿಯೂ ಹಲವು ಕ್ಯಾಚ್ ಅವಕಾಶಗಳನ್ನು ಕೈಚೆಲ್ಲಿದ ಹಾಗೂ ಡಿಆರ್‌ಎಸ್ ವ್ಯವಸ್ಥೆಯನ್ನು ಉಭಯ ತಂಡಗಳು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳದಿದ್ದರೆ ಪಂದ್ಯ ಇನ್ನಷ್ಟು ಅದ್ಭುತವಾಗಿರುತ್ತಿತ್ತು. ಏಷ್ಯಾ ಕಪನ್‌ನ ಎರಡನೇ ಗುಂಪು ಪಂದ್ಯದಲ್ಲಿ ರವಿವಾರ ಪಾಕಿಸ್ತಾನ, ಹಾಂಕಾಂಗ್ ವಿರುದ್ಧ ಸೆಣೆಸಲಿದೆ.

ನಿನ್ನೆ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡವು, ಬಾಂಗ್ಲಾದೇಶ ವಿರುದ್ಧ ಅತ್ಯಂತ ಕನಿಷ್ಠ ಮೊತ್ತ ದಾಖಲಿಸಿದ ಕುಖ್ಯಾತಿಗೂ ಪಾತ್ರವಾಯಿತು. ಶ್ರೀಲಂಕಾ ತಂಡವನ್ನು ಕೇವಲ 137 ರನ್ನುಗಳಿಗೆ ಕಟ್ಟಿಹಾಕುವಲ್ಲಿ ಬಾಂಗ್ಲಾದೇಶ ಯಶಸ್ವಿಯಾಯಿತು. ಶ್ರೀಲಂಕಾ ತಂಡದ ವಿರುದ್ಧ ಬಾಂಗ್ಲಾದೇಶ 45ನೇ ಪಂದ್ಯದಲ್ಲಿ 7ನೇ ಜಯ ದಾಖಲಿಸಿತು.

ಮುಂದಿನ ಹಂತಕ್ಕೆ ಮುನ್ನಡೆಯಲು ಎರಡೂ ಪಂದ್ಯಗಳಲ್ಲಿ ನಮಗೆ ಜಯ ಅನಿವಾರ್ಯವಾಗಿತ್ತು ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮುಶ್ಫಿಕರ್ ರಹೀಂ ಪಂದ್ಯದ ಬಳಿಕ ನುಡಿದರು.

ಟಾಸ್ ಸೋತು 262 ರನ್ನುಗಳ ಗೆಲುವಿನ ಗುರಿಪಡೆದ ಶ್ರೀಲಂಕಾ, ಕೇವಲ 124 ರನ್ನುಗಳಿಗೆ ಆಲೌಟ್ ಆಯಿತು. ದಿರುವಾನ್ ಪೆರೇರಾ (29) ಶ್ರೀಲಂಕಾ ಪರ ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಮುಶ್ರಫ್ ಮೋರ್ತಾಝಾ, ಮುಸ್ತಫಿರ್ರಹ್ಮಾನ್, ಮೆಹದಿ ಹಸೇನಾ ತಲಾ 2 ವಿಕೆಟ್ ಪಡೆದರೆ, ಶಕೀಬ್ ಅಲ್ ಹಸನ್, ರುಬೆಲ್ ಹುಸೈನ್ ಮತ್ತು ಮೊಸದಕ್ ಹುಸೇನ್ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News