ಪೊಲೆಂಡ್ ಬಾಕ್ಸಿಂಗ್ ಟೂರ್ನಿ: ಮೇರಿ ಕೋಮ್‌ಗೆ ಚಿನ್ನ

Update: 2018-09-16 07:28 GMT

 ಗ್ಲೈವೈಸ್(ಪೊಲೆಂಡ್), ಸೆ.16: ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಪೊಲೆಂಡ್‌ನ ಗ್ಲೈವೈಸ್‌ನಲ್ಲಿ ನಡೆದ 13ನೇ ಆವೃತ್ತಿಯ ಸಿಲೆಸಿಯಾನ್ ಮಹಿಳಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

 ಗಾಯದ ಸಮಸ್ಯೆಯಿಂದಾಗಿ ಏಶ್ಯನ್ ಗೇಮ್ಸ್‌ನಿಂದ ದೂರ ಉಳಿದಿದ್ದ ಮೇರಿ ಕೋಮ್ ಶನಿವಾರ ನಡೆದ ಹಿರಿಯರ 48 ಕೆಜಿ ತೂಕ ವಿಭಾಗದ ಫೈನಲ್‌ನಲ್ಲಿ ಕಝಕ್‌ಸ್ತಾನದ ಅಗೆರಿಮ್ ಕಸಾನಯೆವಾರನ್ನು 5-0 ಅಂತರದಿಂದ ಮಣಿಸಿದರು. ಈ ಮೂಲಕ ಈ ವರ್ಷ ಮೂರನೇ ಬಾರಿ ಚಿನ್ನದ ಪದಕ ಜಯಿಸಿದ್ದಾರೆ.

 ಈ ವರ್ಷ ದಿಲ್ಲಿಯಲ್ಲಿ ನಡೆದ ಮೊದಲ ಆವೃತ್ತಿಯ ಇಂಡಿಯಾ ಓಪನ್‌ನಲ್ಲಿ ಹಾಗೂ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದ ಮಣಿಪುರದ ಮೇರಿ ಕೋಮ್ ಬಲ್ಗೇರಿಯದಲ್ಲಿ ನಡೆದ ಪ್ರತಿಷ್ಠಿತ ಸ್ಟ್ರಾನ್‌ಡ್ಜಾ ಸ್ಮಾರಕ ಟೂರ್ನಿಯಲ್ಲಿ ಬೆಳ್ಳಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News