ಪ್ರಚಾರ ಬಯಸದ ಸಾಧಕರನ್ನು ಗುರುತಿಸುವುದು ಅಗತ್ಯ: ಮಾಜಿ ರಾಜ್ಯಸಭೆ ಸದಸ್ಯೆ ಬಿಂಬಾ ರಾಯ್ಕರ್

Update: 2018-09-16 16:44 GMT

ಬೆಂಗಳೂರು, ಸೆ.15: ನಮ್ಮ ಸುತ್ತಮುತ್ತ ಹಲವು ಮಂದಿ ಸಾಧಕರಿರುತ್ತಾರೆ. ಆದರೆ, ಅವರು ತಾವಾಗಿಯೆ ಪ್ರಚಾರ ಬಯಸುವುದಿಲ್ಲ. ಇಂತವರನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಂಘ, ಸಂಸ್ಥೆಗಳ ಕರ್ತವ್ಯವೆಂದು ಮಾಜಿ ರಾಜ್ಯಸಭೆ ಸದಸ್ಯೆ ಬಿಂಬಾ ರಾಯ್ಕರ್ ಅಭಿಪ್ರಾಯಿಸಿದರು.

ರವಿವಾರ ಇಂಟರ್‌ನ್ಯಾಷನಲ್ ಇಂಟಿಗ್ರಿಟಿ ಪೀಸ್ ಅಂಡ್ ಫ್ರೆಂಡ್‌ಶಿಪ್ ಸೊಸೈಟಿ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸ್ ಅವಾರ್ಡ್ 2018 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಬೆಳವಣಿಗೆಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವವರು ಬಹಳ ಮಂದಿ ಇದ್ದಾರೆ. ಅಂತವರನ್ನು ಗುರುತಿಸಿ, ಗೌರವಿಸುವುದರಿಂದ ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ಹಾಗೂ ಅಂತವರ ಪ್ರೇರಣೆಯಿಂದ ಮತ್ತಷ್ಟು ಮಂದಿ ಸಮಾಜ ಸೇವೆಯಲ್ಲಿ ತೊಡಗಲು ಸಾಧ್ಯವಾಗುತ್ತದೆ ಎಂದು ಅವರು ಆಶಿಸಿದರು.

ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ಕೆಲಸವನ್ನು ನಿಸ್ವಾರ್ಥವಾಗಿ ಮಾಡಿದರೆ, ಅದೇ ದೇಶಕ್ಕೆ ಮಾಡುವ ದೊಡ್ಡ ಕೊಡುಗೆಯಾಗಿದೆ. ಈ ನಿಟ್ಟಿನಲ್ಲಿ ಜಾತಿ, ಮತ ಮೀರಿ ನಾವೆಲ್ಲರೂ ಒಂದಾಗಿ ಸಾಗೋಣವೆಂದು ಅವರು ಆಶಿಸಿದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಪ್ರೇಮಲತಾ, ಡಾ.ಎಸ್.ಎಂ.ರಾಜು, ಡಾ.ಸಿ.ಆರ್.ರಾಜೇಂದ್ರ, ಕೆ.ವಿ.ಶ್ರೀನಿವಾಸ, ಡಾ.ಸವಿತಾ ಪಿಳೈ ಸೇರಿದಂತೆ 12ಮಂದಿಗೆ ಎಪಿಜೆ ಅಬ್ದುಲ್ ಕಲಾಂ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News