ಸರಕಾರದಿಂದ ಫಲ ಕಂಡವರೆಷ್ಟು?

Update: 2018-09-16 18:31 GMT

ಮಾನ್ಯರೇ,

ದೋಸ್ತಿ ಸರಕಾರದಲ್ಲಿ ರಾಜ್ಯದ ರೈತರಿಗೆ ಮತ್ತು ಜನರಿಗೆ ಎಷ್ಟು ಫಲಗಳು ಸಿಕ್ಕಿವೆ ಎಂಬುದು ಇಂದಿಗೂ ಅಸ್ಪಷ್ಟ. ರಾಷ್ಟ್ರೀಕೃತ ಬ್ಯಾಂಕುಗಳ 2 ಲಕ್ಷದವರೆಗಿನ ಸುಸ್ತಿಸಾಲದ ಜತೆಗೆ 25 ಸಾವಿರದವರೆಗೆ ಚಾಲ್ತಿ ಬೆಳೆ ಸಾಲ ಮನ್ನಾದ ಸೌಲಭ್ಯವೂ ಸಿಗುವುದು ಎಂದು ‘ವರ’ ಮಹಾಲಕ್ಷ್ಮೀ ಹಬ್ಬದ ಉಡುಗೊರೆ ಎಂದು ರಾಜ್ಯ ಸರಕಾರ ಘೋಷಿಸಿದೆ. ಹಾಗೂ ಇದೇ ರೀತಿಯ ಒಟ್ಟು 30,163 ಕೋಟಿ ರೂ. ರೈತರ ಸಾಲವನ್ನು ತನ್ನ ಆಡಳಿತ ಅಧಿಕಾರಾವಧಿಯಲ್ಲಿ ಮನ್ನಾ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ. ಅಲ್ಲದೆ ಕಳೆದ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಜನ ಪ್ರತಿನಿಧಿಗಳು ರೈತರ ಸಾಲಮನ್ನಾದ ಮಾಹಿತಿಯನ್ನು ಕೂಡ ನೀಡಿಲ್ಲ. ಪ್ರಸ್ತುತ ಆಡಳಿತದಲ್ಲಿರುವ ದೋಸ್ತಿ ಸರಕಾರ ಈ ನೂರು ದಿನಗಳಲ್ಲಿ ಎಷ್ಟು ರೈತರ ಸಾಲಮನ್ನಾವಾಗಿದೆ ಎಂಬ ಸ್ಪಷ್ಟತೆಯನ್ನು ನೀಡಬೇಕಾಗಿದೆ.  

Writer - ಶಿವಕುಮಾರ್.ಎಂ ಬೆಂಗಳೂರು

contributor

Editor - ಶಿವಕುಮಾರ್.ಎಂ ಬೆಂಗಳೂರು

contributor

Similar News