ಬೆಂಗಳೂರು: ಯಶಸ್ವಿ ಹೃದಯ ಕಸಿ ಚಿಕಿತ್ಸೆ

Update: 2018-09-17 14:38 GMT

ಬೆಂಗಳೂರು, ಸೆ.17: ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಧರ್ಮಪುರಿಯ 39 ವರ್ಷದ ರೈತರೊಬ್ಬರಿಗೆ ಯಶಸ್ವಿ ಹೃದಯ ಕಸಿ ಚಿಕಿತ್ಸೆ ಮಾಡಲಾಯಿತು.

ಅಪಘಾತಕ್ಕೆ ಗುರಿಯಾಗಿ ಮಿದುಳಿನ ಸಾವಿಗೆ ಗುರಿಯಾಗಿದ್ದರೆಂದು ಘೋಷಿಸಲಾಗಿದ್ದ 42 ವರ್ಷ ವಯಸ್ಸಿನ ಮಹಿಳೆಯಿಂದ ಹೃದಯವನ್ನು ತೆಗೆದು, ಕುಟುಂಬದ ಒಪ್ಪಿಗೆ ಪಡೆದ ನಂತರ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ಈ ಹೃದಯದ ಹಂಚಿಕೆಯನ್ನು ಮಾಡಲಾಗಿತ್ತು.

ಈ ಘಟನೆಯ ನಂತರ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಿಂದ ಬೆಳಗ್ಗೆ 4.45ಕ್ಕೆ ಹೊರಟ ಹೃದಯ ಎಂಟು ನಿಮಿಷಗಳಲ್ಲಿ ಫೋರ್ಟಿಸ್ ಆಸ್ಪತ್ರೆಯನ್ನು ತಲುಪಿಸಲಾಗಿತ್ತು. ಅಂಗವನ್ನು ಸಾಗಿಸುವುದರ ಕುರಿತು ಮುಂಚಿತವಾಗಿ ಆಸ್ಪತ್ರೆಯ ವೈದ್ಯರಿಗೆ ತಿಳಿಸಲಾಗಿತ್ತು.

ಆಸ್ಪತ್ರೆಯ ವೈದ್ಯರು ಅಂಗದ ಮೌಲ್ಯೀಕರಣಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅನಂತರ ಆಸ್ಪತ್ರೆಯ ಹೃದಯ ರಕ್ತನಾಳ ವಿಭಾಗದ ಅಧ್ಯಕ್ಷ ಹಾಗೂ ಮುಖ್ಯ ಹೃದಯ ಮತ್ತು ಎದೆಭಾಗದ ಹಾಗೂ ರಕ್ತನಾಳಗಳ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ವಿವೇಕ್ ಜವಳಿ ಮತ್ತು ಹೃದಯ ರಕ್ತನಾಳ ಮತ್ತು ಎದೆಭಾಗದ ಶಸ್ತ್ರಚಿಕಿತ್ಸಾ ತಜ್ಞ ಡಾ.ಪ್ರಿಯಾಂಕ್ ಭಟ್ ಹೊರ ತೆಗೆದು, ಯಶಸ್ವಿಯಾಗಿ ರೈತನಿಗೆ ಕಸಿ ಮಾಡಲಾಯಿತು ಎಂದು ಆಸ್ಪತ್ರೆಯ ವೈದ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News