60,000 ರೂ. ಪರಿಹಾರ ನೀಡಲು ಇಂಡಿಗೋ ಏರ್‌ಲೈನ್ಸ್‌ಗೆ ಗ್ರಾಹಕ ಆಯೋಗ ಸೂಚನೆ

Update: 2018-09-18 06:02 GMT

 ಹೊಸದಿಲ್ಲಿ, ಸೆ.19: ವಿಮಾನವೇರಲು ಕಾಯುತ್ತಿದ್ದ ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡದೇ ವಿಮಾನ ನಿಲ್ದಾಣದಲ್ಲೇ ಬಿಟ್ಟುಹೋಗಿದ್ದ ಕೋಲ್ಕತಾದಿಂದ ಅಗರ್ತಲಕ್ಕೆ ತೆರಳುತ್ತಿದ್ದ ಇಂಡಿಯೋ ಏರ್‌ಲೈನ್ಸ್‌ಗೆ ರಾಷ್ಟ್ರೀಯ ವಿವಾದ ಪರಿಹಾರ ಆಯೋಗ(ಎನ್‌ಸಿಡಿಆರ್‌ಸಿ)20,000 ರೂ. ಜೊತೆಗೆ ಇನ್ನೂ 41,000 ರೂ.ವನ್ನು ಗ್ರಾಹಕರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.

 ಏರ್‌ಲೈನ್ಸ್‌ನ ಬೇಜವಾಬ್ದಾರಿತನ ಪ್ರಶ್ನಿಸಿ ನೊಂದ ಕುಟುಂಬವೊಂದು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಎನ್‌ಸಿಡಿಆರ್‌ಸಿ ಈ ತೀರ್ಪು ನೀಡಿದೆ.

ಏರ್‌ಲೈನ್ಸ್ ಸಲ್ಲಿಸಿದ್ದ ಪುನರ್‌ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿದ ಎನ್‌ಸಿಡಿಆರ್‌ಸಿಯ ಜಸ್ಟಿಸ್ ಆರ್‌ಕೆ ಅಗರ್ವಾಲ್ ಹಾಗೂ ಸದಸ್ಯ ಶ್ರೀಶಾ ಅವರಿದ್ದ ಪೀಠ ಪ್ರಯಾಣಿಕರನ್ನು ಸಂಪರ್ಕಿಸಲು ವಿಫಲವಾಗಿರುವ ಏರ್‌ಲೈನ್ಸ್‌ನ್ನು ಹೊಣೆಗಾರನನ್ನಾಗಿ ಮಾಡಿತು.

 ಏರ್‌ಲೈನ್ಸ್‌ನ ವೆಬ್‌ಸೈಟ್‌ನಲ್ಲಿ ನಮೂದಿಸಿರುವ ನಿಯಮ ಹಾಗೂ ಷರತ್ತುಗಳ ಪ್ರಕಾರ ವಿಮಾನ ಬುಕ್ಕಿಂಗ್ ವೇಳೆ ಪ್ರಯಾಣಿಕರು ತಮ್ಮ ಸಂಪರ್ಕ ಸಂಖ್ಯೆಯನ್ನು ನೀಡುವುದು ಕಡ್ಡಾಯ. ಇಂಡಿಗೋ ಏರ್‌ಲೈನ್ಸ್ ಮೊಬೈಲ್ ಫೋನ್ ಮೂಲಕ ಪ್ರಯಾಣಿಕರನ್ನು ಸಂಪರ್ಕಿಸಲು ಆದ್ಯತೆ ನೀಡಲಿದೆ.

 ವಿಮಾನದ ಬುಕ್ಕಿಂಗ್ ವೇಳೆ ಪ್ರಯಾಣಿಕರು ಮೊಬೈಲ್ ಸಂಖ್ಯೆಯನ್ನು ನೀಡಿರುವುದು ಸ್ಪಷ್ಟವಾಗಿದೆ. ಕುಟುಂಬ ಸದಸ್ಯರ ಸಂಪರ್ಕ ಸಂಖ್ಯೆ ಲಭ್ಯವಿದ್ದರೂ ಅವರಿಗೆ ಕರೆ ಮಾಡದೇ ಇರುವ ಬಗ್ಗೆ ಏರ್‌ಲೈನ್ಸ್ ಪರ ಅರ್ಜಿದಾರರು ಸಂಪೂರ್ಣ ವೌನವಹಿಸಿದ್ದಕ್ಕೆ ದ್ವಿಸದಸ್ಯ ಪೀಠ ಅಚ್ಚರಿವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News