ತೆಲಂಗಾಣ: ಸರಕಾರಿ ಗುಮಾಸ್ತ ಉದ್ಯೋಗಕ್ಕೆ ನೂರಾರು ಪದವೀಧರರು, ಇಂಜಿನಿಯರ್‌ಗಳಿಂದ ಅರ್ಜಿ!

Update: 2018-09-18 07:19 GMT

ಹೈದರಾಬಾದ್, ಸೆ.18: ದೇಶದಲ್ಲಿ ದಿನದಿಂದ ದಿನಕ್ಕೆ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುತ್ತಿದ್ದು ಇದಕ್ಕೆ ತೆಲಂಗಾಣ ರಾಜ್ಯ ಹೊರತಾಗಿಲ್ಲ. ಇಲ್ಲಿ 700 ಸರಕಾರಿ ಉದ್ಯೋಗಕ್ಕೆ ಲಕ್ಷಾಂತರ ಜನರು ಅರ್ಜಿ ಸಲ್ಲಿಸಿದ್ದಾರೆ.

12ನೇ ತರಗತಿ ಪಾಸಾಗುವ ಅಗತ್ಯವಿರುವ ಸರಕಾರಿ ಗುಮಾಸ್ತ ಉದ್ಯೋಗಕ್ಕೆ ನೂರಾರು ಪಿಎಚ್‌ಡಿ ಹಾಗೂ ಎಂಫಿಲ್ ಡಿಗ್ರಿ, ಸ್ನಾತಕೋತ್ತರ ಹಾಗೂ ಇಂಜಿನಿಯರ್ ಪದವೀಧರರು ಅರ್ಜಿ ಸಲ್ಲಿಸಿದ್ದು ಅಚ್ಚರಿ ವಿಚಾರವಾಗಿದೆ.

‘‘ನಾನು ಮೆಕಾನಿಕಲ್ ಇಂಜಿನಿಯರ್. ಈಗ ನಮಗೆ ಬಿಪಿಒನಲ್ಲಿ ಕೆಲಸ ಸಿಗುತ್ತದೆ. ಕೇವಲ 15,000 ರೂ. ಸಂಬಳ ಸಿಗುತ್ತದೆ. ಸರಕಾರಿ ಉದ್ಯೋಗವಾದರೆ ಭದ್ರತೆ ಇರುತ್ತದೆ. ನನ್ನ ಈಗಿನ ಖಾಸಗಿ ಉದ್ಯೋಗಗಿಂತ ಎರಡು ಪಟ್ಟು ಹೆಚ್ಚು ಸಂಬಳ ಸಿಗುತ್ತದೆ’’ ಎಂದು ತೆಲಂಗಾಣ ರಾಜ್ಯ ಪಬ್ಲಿಕ್ ಸರ್ವಿಸ್ ಕಮಿಶನ್ ಪರೀಕ್ಷೆ ಬರೆಯಲು ಸಜ್ಜಾಗಿರುವ ಪ್ರಶಾಂತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News