ವಾರಣಾಸಿಯಲ್ಲಿ 550 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಪ್ರಧಾನಿ ಚಾಲನೆ

Update: 2018-09-18 08:47 GMT

ಹೊಸದಿಲ್ಲಿ, ಸೆ.18: ಸುಮಾರು 550 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಚಾಲನೆ ನೀಡಿದರು. ಬನಾರಸ್ ಹಿಂದೂ ವಿವಿಯಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾರಣಾಸಿಯಲ್ಲಿ ಎಲ್ಲಾ ದಿಕ್ಕುಗಳಿಂದಲೂ ಬದಲಾವಣೆ ಆರಂಭವಾಗಿದೆ. ನೇತಾಡುವ ವಿದ್ಯುತ್ ತಂತಿಗಳಿಂದ ಈ ನಗರ ಯಾವಾಗ ಮುಕ್ತವಾಗಲಿದೆ ಎಂದು ನಾನು ಯೋಚಿಸುತ್ತಿದ್ದೆ. ಇಂದು ಕೆಲ ಭಾಗಗಳಲ್ಲಿ ಅದು ಮಾಯವಾಗಿವೆ. ಹಿಂದಿನ ಸರಕಾರಗಳು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿರಲಿಲ್ಲ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News