‘ಆಯುಷ್ಮಾನ್ ಭಾರತ್’ ಯೋಜನೆಗೆ ನೀವು ಅರ್ಹರೇ ಎನ್ನುವುದನ್ನು ತಿಳಿದುಕೊಳ್ಳುವುದು ಹೇಗೆ?

Update: 2018-09-18 11:22 GMT

ಜನತೆಗೆ ಉಚಿತವಾಗಿ ಆರೋಗ್ಯ ಸೇವೆಯನ್ನೊದಗಿಸುವ ಕೇಂದ್ರದ ಆಯುಷ್ಮಾನ್ ಭಾರತ ಯೋಜನೆಯ ಸಂಭಾವ್ಯ ಫಲಾನುಭವಿಗಳು ತಮ್ಮ ಹೆಸರು ಯೋಜನೆಯ ಅಂತಿಮ ಪಟ್ಟಿಯಲ್ಲಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ನೆರವಾಗಲು ರಾಷ್ಟ್ರೀಯ ಆರೋಗ್ಯ ಏಜೆನ್ಸಿ(ಎನ್‌ಎಚ್‌ಎ)ಯು ವೆಬ್‌ಸೈಟ್ ಮತ್ತು ಸಹಾಯವಾಣಿ ಸಂಖ್ಯೆಯೊಂದನ್ನು ಆರಂಭಿಸಿದೆ.

ಯೋಜನೆಗೆ ನಿಮ್ಮ ಅರ್ಹತೆಯನ್ನು ತಿಳಿದುಕೊಳ್ಳಲು ನೀವು 14555 ಸಹಾಯವಾಣಿ ಸಂಖ್ಯೆಗೆ ಫೋನಾಯಿಸಬಹುದು. ನೀವು ಇದನ್ನು ಆನ್‌ಲೈನ್‌ನಲ್ಲಿಯೂ ತಿಳಿದುಕೊಳ್ಳಬಹುದು. ಅದಕ್ಕಾಗಿ ಅನುಸರಿಸಬೇಕಾದ ಕ್ರಮಗಳು ಹೀಗಿವೆ.....

 ಮೊದಲಿಗೆ ಎನ್‌ಎಚ್‌ಎ ಪೋರ್ಟಲ್ mera.pmjay.gov.in ಗೆ ಲಾಗಿನ್ ಆಗಿ. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಸ್ಕ್ರೀನ್‌ನಲ್ಲಿರುವ ಕಾಪ್ಚಾ ಕೋಡ್ ಅನ್ನು ದಾಖಲಿಸಿ. ಇದಾದ ಬಳಿಕ ಒಂದು ಬಾರಿಯ ಪಾಸ್‌ವರ್ಡ್(ಒಟಿಪಿ) ನಿಮ್ಮ ಮೊಬೈಲ್‌ಗೆ ಬರುತ್ತದೆ. ಈ ಒಟಿಪಿಯನ್ನು ಎಂಟರ್ ಮಾಡಿದ ಬಳಿಕ ನಿಮ್ಮ ಮುಂದೆ ಹೊಸ ಪುಟವೊಂದು ತೆರೆದುಕೊಳ್ಳುತ್ತದೆ

 ಈಗ ರಾಜ್ಯವನ್ನು ಆಯ್ಕೆ ಮಾಡಿಕೊಂಡು ಬಳಿಕ ನಿಮ್ಮ ಅರ್ಹತೆನ್ನು ಹೇಗೆ ಪರೀಕ್ಷಿಸಬೇಕು ಎನ್ನುವುದನ್ನು ಸೂಚಿಸಿ. ಅಂದರೆ ನಿಮ್ಮ ಹೆಸರು,ಮೊಬೈಲ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ,ರಾಷ್ಟ್ರೀಯ ಸ್ವಾಸ್ಥ ಬಿಮಾ ಯೋಜನೆಯ ಯುಆರ್‌ಎನ್ ಸಂಖ್ಯೆ ಇವುಗಳ ಪೈಕಿ ಯಾವುದಾದರೂ ಒಂದನ್ನು ದಾಖಲಿಸಿದರೂ ಸಾಕು. ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ ಪುಟದ ಬಲಗಡೆ ಅದು ಕಾಣಿಸಿಕೊಳ್ಳುತ್ತದೆ. ಫಲಾನುಭವಿಗಳ ವಿವರಗಳನ್ನು ತಿಳಿಯಲು ‘ಫ್ಯಾಮಿಲಿ ಮೆಂಬರ್ಸ್ ’ ಟ್ಯಾಬ್‌ನ್ನು ಕ್ಲಿಕ್ಕಿಸಿ. ಯೋಜನೆಯ ವ್ಯಾಪ್ತಿಯಲ್ಲಿರುವ ನಿಮ್ಮ ಕುಟುಂಬದ ಇತರ ಸದಸ್ಯರ ಮಾಹಿತಿಗಳು ದೊರೆಯುತ್ತವೆ.

 2011ರ ಸಾಮಾಜಿಕ-ಆರ್ಥಿಕ ಜಾತಿ ಗಣತಿಯ ಆಧಾರದಲ್ಲಿ ಈ ಪಟ್ಟಿಯಲ್ಲಿ ಅರ್ಹ ಫಲಾನುಭವಿಗಳ ಹೆಸರುಗಳನ್ನು ಸೇರಿಸಲಾಗಿದೆ. ದೇಶದ ಸುಮಾರು 50 ಕೋಟಿ ಜನರು ಯೋಜನೆಯ ಫಲಾನುಭವಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News