ಗೂಂಡಾ ಕಾಯ್ದೆ: ರೌಡಿ ಸಂಜಯ್ ಸೆರೆ

Update: 2018-09-18 13:44 GMT

ಬೆಂಗಳೂರು, ಸೆ.18: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪದಡಿ ಗೂಂಡಾಕಾಯ್ದೆಯಡಿ ರೌಡಿ ಸಂಜಯ್ ಎಂಬಾತನನ್ನು ಇಲ್ಲಿನ ನಂದಿನಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

23 ವರ್ಷದ ರೌಡಿ ಸಂಜಯ್, ನಗರದ ಜೈಭುವನೇಶ್ವರಿ ನಗರದಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

2012ನೆ ಸಾಲಿನಿಂದಲೂ ನಗರ ವ್ಯಾಪ್ತಿಯ ರಾಜಗೋಪಾಲನಗರ, ಮಹಾಲಕ್ಷ್ಮೀಲೇಔಟ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಕೊಲೆ, ಕೊಲೆ ಪ್ರಯತ್ನ, ಸುಲಿಗೆ, ದರೋಡೆ, ಅಪಹರಣ, ಹಲ್ಲೆ ಹಾಗೂ ಇತರೆ ಹಲವು ಅಪರಾಧ ಪ್ರಕರಣಗಳು ರೌಡಿ ಸಂಜಯ್ ವಿರುದ್ಧ ದಾಖಲಾಗಿದೆ.

ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿ ಜಯಪ್ರಕಾಶ್ ಬನ್ಸಾಲ್ ಎಂಬವರನ್ನು ಹಣಕ್ಕಾಗಿ ಅಪಹರಣ ಮಾಡಿದ್ದ ಪ್ರಕರಣದಲ್ಲೂ ಬಂಧಿತ ಸಂಜಯ್ ಭಾಗಿಯಾಗಿದ್ದ. ರೌಡಿ ಚಟುವಟಿಕೆ ಮತ್ತು ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದು ಸಾರ್ವಜನಿಕರಲ್ಲಿ ಭಯ ಭೀತಿಯನ್ನುಂಟು ಮಾಡುತ್ತಿರುವುದರಿಂದ ಈತನನ್ನು ಗೂಂಡಾಕಾಯ್ದೆಯಡಿಯಲ್ಲಿ ಬಂಧನ ಮಾಡಲಾಗಿದೆ.

ನಂದಿನಿ ಲೇಔಟ್ ಪೊಲೀಸ್ ಠಾಣೆಯ ಬಿ.ಎನ್.ಲೋಹಿತ್ ಅವರು ವರದಿ ಸಲ್ಲಿಸಿದ್ದು, ಇದರ ಅನ್ವಯ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್, ರೌಡಿ ಸಂಜಯ್‌ನನ್ನು ಗೂಂಡಾಕಾಯ್ದೆಯಡಿಯಲ್ಲಿ ಬಂಧಿಸಲು ಆದೇಶಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News