ವಿದೇಶಿ ಸಿಗರೇಟ್ ಮಾರಾಟ: ಮೂವರ ಸೆರೆ

Update: 2018-09-18 14:02 GMT

ಬೆಂಗಳೂರು, ಸೆ.18: ವಿದೇಶಿ ಉತ್ಪನ್ನ ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರನ್ನು ಇಲ್ಲಿನ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಮಲ್ಲೇಶ್ವರಂ ನಿವಾಸಿ ಅಮ್ಜದ್ ಪಾಷಾ, ಯಶವಂತಪುರ ಸತೀಶ್ ಕುಮಾರ್, ಜಯಂತಿಲಾಲ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಗೋವರ್ಧನ್ ಬಸ್ ನಿಲ್ದಾಣದಲ್ಲಿ ಮೂರು ಜನರು ಒಂದು ಬ್ಯಾಗ್‌ನಲ್ಲಿ ವಿದೇಶದಲ್ಲಿ ಉತ್ಪನ್ನವಾಗುವ ಗೋಲ್ಡ್ ಪ್ಯಾಕ್ ಕಿಂಗ್ ಸಿಗರೇಟು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾರೆಂದು ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳಿಂದ 10 ಪ್ಯಾಕ್‌ಗಳಿರುವ 124 ಬಂಡಲ್‌ಗಳ ಸಿಗರೇಟ್ ಜಪ್ತಿ ಮಾಡಲಾಗಿದ್ದು, ತಂಬಾಕು ಉತ್ಪನ್ನ ಕಾಯ್ದೆ 2003ರ ಅನ್ವಯ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News