ಉ-ಕರ್ನಾಟಕ, ಗೋವಾ, ಗೋಕರ್ಣ ಪ್ರವಾಸಕ್ಕೆ ಸಾರಿಗೆ ಸೌಲಭ್ಯ

Update: 2018-09-18 16:12 GMT

ಬೆಂಗಳೂರು, ಸೆ.18: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರಾಜ್ಯ ಹಾಗೂ ಹೊರರಾಜ್ಯ ಪ್ರವಾಸಿಗರಿಗಾಗಿ ಉತ್ತರ ಕರ್ನಾಟಕ ಹಾಗೂ ಗೋವಾ, ಗೋಕರ್ಣ ಪ್ರವಾಸಕ್ಕೆ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.

ಉ-ಕರ್ನಾಟಕ ಪಾರಂಪರಿಕ ಸ್ಥಳಗಳ ಪ್ರವಾಸ: ಈ ಪ್ರವಾಸವು ಐದು ದಿವಸಗಳ ಪ್ರವಾಸವಾಗಿದ್ದು, ಉತ್ತರ ಕರ್ನಾಟಕದ ಪಾರಂಪರಿಕ ಸ್ಥಳಗಳಾದ ಹಂಪಿ, ಹೊಸಪೇಟೆ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಕೂಡಲಸಂಗಮ, ವಿಜಾಪುರ ಮುಂತಾದ ಸ್ಥಳಗಳನ್ನು ವೀಕ್ಷಿಸುವ ಅವಕಾಶವನ್ನು ಪ್ರವಾಸಿಗರಿಗೆ ಕಲ್ಪಿಸಲಾಗುತ್ತದೆ. ಈ ಪ್ರವಾಸವು ಬೆಂಗಳೂರಿನಿಂದ ಪ್ರತಿ ಗುರುವಾರ ರಾತ್ರಿ 10ಕ್ಕೆ ಹೊರಟು ಸೋಮವಾರ ಬೆಳಗ್ಗೆ 6ಕ್ಕೆ ಮರಳಿ ಬೆಂಗಳೂರಿಗೆ ಬರುತ್ತದೆ. ಈ ಪ್ರವಾಸದ ದರ ರೂ. 4,700ರೂ.ಆಗಿದೆ.

ಗೋವಾ-ಗೋಕರ್ಣ ಪ್ರವಾಸ: ಈ ಪ್ರವಾಸವು 5 ದಿನಗಳ ಪ್ರವಾಸವಾಗಿರುತ್ತದೆ. ಈ ಪ್ರವಾಸವು ಪ್ರತಿ ಗುರುವಾರ ಆರಂಭವಾಗಿ ಸೋಮವಾರ ಬೆಳಗ್ಗೆ ಕೊನೆಗೊಳ್ಳುತ್ತದೆ. ಸದರಿ ಪ್ರವಾಸಕ್ಕೆ ಒಬ್ಬರಿಗೆ 5,600ರೂ.(ಸಾರಿಗೆ ಮತ್ತು ವಸತಿ ಸೌಲಭ್ಯ ಸೇರಿ) ಆಗಲಿದೆ. ಪ್ರವಾಸಿಗರಿಗೆ ಈ ಪ್ರವಾಸದಲ್ಲಿ ಗೋವಾ ಮತ್ತು ಗೋಕರ್ಣದ ಜಗತ್‌ಪ್ರಸಿದ್ಧ ಬೀಚ್‌ಗಳನ್ನು ಹಾಗೂ ದೇವಸ್ಥಾನಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.

ಮೇಲಿನ ಎರಡೂ ಪ್ರವಾಸಗಳನ್ನು ಎಸಿ ಡಿಲಕ್ಸ್ ವಾಹನ ಸೌಲಭ್ಯವಿರುತ್ತದೆ. ಮುಂಗಡ ಬುಕ್ಕಿಂಗ್ ವ್ಯವಸ್ಥೆಯನ್ನು ನಿಗಮದ ಬುಕ್ಕಿಂಗ್ ಕೌಂಟರ್‌ಗಳು ಕೆಎಸ್ಸಾರ್ಟಿಸಿ ಅವತಾರ್ ಪೋರ್ಟಲ್ ಹಾಗೂ ರೆಡ್‌ಬಸ್ ಪೋರ್ಟಲ್ ಮುಖಾಂತರ ಮಾಡಲಾಗುತ್ತದೆ. ಪ್ರವಾಸದ ಬುಕ್ಕಿಂಗ್‌ಗಾಗಿ ಯಶವಂತಪುರದಲ್ಲಿರುವ ಪ್ರಧಾನ ಬುಕ್ಕಿಂಗ್ ಕೇಂದ್ರವನ್ನು ಹಾಗೂ ಕೆಂಪೇಗೌಡ ಬಸ್ ನಿಲ್ದಾಣದಲ್ಲಿನ ನಿಗಮದ ಕೌಂಟರ್‌ನ್ನು ಸಂಪರ್ಕಿಸಬಹುದಾಗಿದೆ. ಆನ್‌ಲೈನ್ www.kstdc.co ನಲ್ಲಿ ಬುಕ್ ಮಾಡಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ದೂ.080-4334 4334/35, 8970650070, 8970650075 ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News