ಸದಾಶಿವ ಆಯೋಗದ ವರದಿ ಶಿಫಾರಸ್ಸಿಗೆ ಒತ್ತಾಯ

Update: 2018-09-18 16:14 GMT

ಬೆಂಗಳೂರು, ಸೆ. 18: ರಾಜ್ಯ ಸರಕಾರ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರಕಾರಕ್ಕೆ ನ.30ರೊಳಗೆ ಯಥಾವತ್ತಾಗಿ ಶಿಫಾರಸ್ಸು ಮಾಡಬೇಕು. ಇಲ್ಲದಿದ್ದರೆ ಡಿ.11ರಂದು ಬೆಂಗಳೂರು ಬಂದ್‌ಗೆ ಕರೆ ನೀಡುತ್ತೇವೆ ಎಂದು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿ ಸಮನ್ವಯ ಸಮಿತಿ ಎಚ್ಚರಿಕೆ ನೀಡಿದೆ.

ಮಂಗಳವಾರ ನಗರದ ಪೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯ ಆನಂದ ಮಾತನಾಡಿ, ಸದಾಶಿವ ಆಯೋಗ ದಲಿತರ ಒಳ ಮೀಸಲಾತಿ ಕುರಿತು ಸುದೀರ್ಘ ಅಧ್ಯಯನ ನಡೆಸಿದ ನಂತರ, ಜನಸಂಖ್ಯಾವಾರು ಮೀಸಲಾತಿ ಹಂಚುವ ವೈಜ್ಞಾನಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಿ 7 ವರ್ಷಗಳಾದರೂ ರಾಜ್ಯ ಸರಕಾರ ತಾತ್ಸಾರ ಮನೋಭಾವ ಹೊಂದಿರುವುದು ವಿಷಾದನೀಯ ಎಂದರು.

ಕರ್ನಾಟಕದ 101 ದಲಿತ ಜಾತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೂಲ ಅಸ್ಪಶ್ಯ ಮಾದಿಗ ಜನಾಂಗ ತೀರಾ ಕೆಳಸ್ತರದಲ್ಲಿದೆ. ಕೆಲವು ಅಲ್ಪಸಂಖ್ಯಾತ ದಲಿತರು ಹೆಚ್ಚು ಮೀಸಲಾತಿಯನ್ನು ಪಡೆಯುತ್ತಿದ್ದು, ಜನಾಂಗಕ್ಕೆ ಸಿಗಬೇಕಾದ ಮೀಸಲಾತಿ ಸೌಲಭ್ಯಗಳು ಅಸಮರ್ಪಕವಾಗಿ ಹಂಚಿಕೆಯಾಗಿಲ್ಲ ಎಂದು ತಿಳಿಸಿದರು.

ನಿಕಟ ಪೂರ್ವ ಸರಕಾರ ಘೋಷಿಸಿದ್ದ ಆದಿಜಾಂಬವ ಅಭಿವೃದ್ಧಿ ನಿಗಮಕ್ಕೆ ಒಂದು ಸಾವಿರ ಕೋಟಿ ಹಣವನ್ನು ಮೀಸಲಿಟ್ಟು, ಡಿಸೆಂಬರ್‌ನಿಂದ ಅನುಷ್ಠಾನಗೊಳಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News