ಶಿಕ್ಷಕರು ಬೋಧನೆಗೆ ಮಾತ್ರ ಸೀಮಿತವಾಗಿರಲಿ

Update: 2018-09-18 18:31 GMT

ಮಾನ್ಯರೇ,

ರಾಜ್ಯಾದ್ಯಂತ ಸರಕಾರಿ ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢಶಾಲೆಗಳಲ್ಲಿ ಮುಖ್ಯ ಶಿಕ್ಷಕರಿಗೆ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯನ್ನು ಕಂಪ್ಯೂಟರ್‌ಗೆ ಅಪ್ಲೋಡ್ ಮಾಡುವ ಹೊಣೆಗಾರಿಕೆ ನೀಡಿರುವುದರಿಂದ ಪಾಠ ಪ್ರವಚನಗಳು ಬಹುತೇಕ ಸ್ಥಗಿತಗೊಳ್ಳುತ್ತಿವೆ. ಇತ್ತೀಚೆಗೆ ರಾಜ್ಯ ಸರಕಾರವು ಶಿಕ್ಷಕರನ್ನು ಪಾಠದ ಹೊಣೆಯಿಂದ ಹೊರತಾದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಿಗೊಳಿಸಲು ಚಿಂತಿಸಿದ್ದು ಸರಕಾರದ ಇಂತಹ ನಿರ್ಧಾರ ನಿಜಕ್ಕೂ ಶಾಘ್ಲನೀಯ.
ಸರಕಾರಿ ಶಾಲೆಗಳ ಶಿಕ್ಷಕರಿಗೆ ಚುನಾವಣೆ, ಗಣತಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆತರುವುದು ಸೇರಿದಂತೆ ನಾನಾ ಜವಾಬ್ದಾರಿಗಳನ್ನು ಹೇರಲಾಗಿದೆ. ಇದು ಶಿಕ್ಷಕರ ಮೇಲಿನ ಒತ್ತಡವನ್ನು ಹೆಚ್ಚಿಸಿ, ಪಾಠ ಹಾಗೂ ಮಕ್ಕಳ ಮೇಲಿನ ನಿಗಾಕ್ಕೆ ದೊರಕುವ ಅವಧಿಯನ್ನು ಕಡಿಮೆಗೊಳಿಸುತ್ತಿದೆ. ಆದ್ದರಿಂದ ಸರಕಾರ ಗಂಭೀರವಾಗಿ ಪರಿಗಣಿಸಿ ಶಿಕ್ಷಕರನ್ನು ಪಠ್ಯೇತರ ಹೊಣೆಗಾರಿಕೆಯಿಂದ ಮುಕ್ತಗೊಳಿಸುವುದು ಸೂಕ್ತ. ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಬಗ್ಗೆ ನಿರಂತರವಾಗಿ ಕೇವಲ ಮಾತನಾಡುತ್ತ ಬಂದಿರುವ ಸರಕಾರವು ಶಿಕ್ಷಕರಿಗೆ ಪಾಠ ಪ್ರವಚನಗಳಿಗೆ ಸರಿಯಾಗಿ ಸಮಯ ಸಿಗುವಂತೆ ಮಾಡಿದರೆ ಅರ್ಧ ಸಮಸ್ಯೆ ನಿವಾರಣೆಯಾಗುತ್ತದೆ.

Writer - ಭಾಗ್ಯಶ್ರೀ ಎಸ್., ಶಿವಮೊಗ್ಗ

contributor

Editor - ಭಾಗ್ಯಶ್ರೀ ಎಸ್., ಶಿವಮೊಗ್ಗ

contributor

Similar News