ಶೇರು ಪೇಟೆ ಕಂಪನ: ಮೂರು ದಿನಗಳಲ್ಲಿ ಹೂಡಿಕೆದಾರರಿಗೆ 3.62 ಲಕ್ಷ ಕೋಟಿ ರೂ. ಖೋತಾ

Update: 2018-09-19 17:00 GMT

ಹೊಸದಿಲ್ಲಿ, ಸೆ.19: ಶೇರು ಮಾರುಕಟ್ಟೆಯಲ್ಲಿ ಉಂಟಾಗಿರುವ ಕುಸಿತವು ಮೂರನೇ ದಿನವಾದ ಬುಧವಾರವೂ ಮುಂದುವರಿದಿದ್ದು ಈ ಮೂರು ದಿನಗಳಲ್ಲಿ ಹೂಡಿಕೆದಾರರು ಬರೋಬ್ಬರಿ 3.62 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ.

ಬಿಎಸ್‌ಇ ಸೆನ್ಸೆಕ್ಸ್ 169.45 ಅಂಕಗಳನ್ನು ಕಳೆದುಕೊಂಡು 37,121.22ಕ್ಕೆ ದಿನದ ವಹಿವಾಟನ್ನು ಕೊನೆಗೊಳಿಸಿತು. ಸೋಮವಾರದಿಂದ ಸೂಚ್ಯಂಕವು 970 ಅಂಕಗಳನ್ನು ಕಳೆದುಕೊಂಡಿದ್ದು ಶೇ.2.5ಕ್ಕೂ ಅಧಿಕ ದರದಲ್ಲಿ ಕುಸಿತವನ್ನು ಕಂಡಿದೆ. ಅಮೆರಿಕ ಮತ್ತು ಚೀನಾದ ನಡುವೆ ನಡೆಯುತ್ತಿರುವ ವ್ಯಾಪಾರ ಸಮರ, ಕಚ್ಚಾತೈಲ ಬೆಲೆಯಲ್ಲಿ ಏರಿಕೆ ಮತ್ತು ರೂಪಾಯಿ ವೌಲ್ಯ ಕುಸಿತದ ಪರಿಣಾಮ ಶೇರು ಮಾರುಕಟ್ಟೆಯ ಮೇಲಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಉತ್ತಮ ಜಾಗತಿಕ ಸೂಚನೆ ಮತ್ತು ರೂಪಾಯಿ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆಯ ಹೊರತಾಗಿಯೂ ತೈಲ ಬೆಲೆಯಲ್ಲಿ ಏರಿಕೆಯಾಗಿರುವ ಕಾರಣ ಶೇರು ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಾಗಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News