ಲಂಡನ್: ‘ದ್ವೇಷಾಪರಾಧ’ ಘಟನೆಯಲ್ಲಿ ಮೂವರಿಗೆ ಗಾಯ

Update: 2018-09-19 17:06 GMT

ಲಂಡನ್, ಸೆ. 19: ಲಂಡನ್‌ನ ಮುಸ್ಲಿಮ್ ಸಮುದಾಯ ಕೇಂದ್ರವೊಂದರ ಸಮೀಪ ಕಾರೊಂದು ಪಾದಚಾರಿಗಳಿಗೆ ಢಿಕ್ಕಿ ಹೊಡೆದ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಪೊಲೀಸರು ಈ ಘಟನೆಯನ್ನು ಸಂಭಾವ್ಯ ದ್ವೇಷಾಪರಾಧವೆಂಬಂತೆ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.

ಕಾರಿನಲ್ಲಿದ್ದ ನಾಲ್ವರು ಮತ್ತು ವಾಯುವ್ಯ ಲಂಡನ್‌ನ ಕ್ರಿಕಲ್‌ವುಡ್ ಪ್ರದೇಶದಲ್ಲಿರುವ ಮುಸ್ಲಿಮ್ ಸಮುದಾಯ ಕೇಂದ್ರಕ್ಕೆ ಭೇಟಿ ನೀಡಿರುವ ದೊಡ್ಡ ಗುಂಪೊಂದರ ನಡುವೆ ಬುಧವಾರ ಮುಂಜಾನೆ ಘರ್ಷಣೆ ನಡೆದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಕೆಲವರು ಮುಸ್ಲಿಮ್ ವಿರೋಧಿ ಘೋಷಣೆಗಳನ್ನು ಕೂಗಿದರು ಹಾಗೂ ಗುಂಪಿನಲ್ಲಿದ್ದ ಕೆಲವರು ಕಾರಿಗೆ ಹಾನಿ ಮಾಡಿದರು ಎಂದು ಪೊಲೀಸರು ತಿಳಿಸಿದರು. ಬಳಿಕ ಕಾರು ಸ್ಥಳದಲ್ಲಿದ್ದ ಮೂವರಿಗೆ ಢಿಕ್ಕಿ ಹೊಡೆದು ಪರಾರಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News