ಮಲೇಶ್ಯ: ಮಾಜಿ ಪ್ರಧಾನಿ ನಜೀಬ್ ಬಂಧನ

Update: 2018-09-19 17:10 GMT

ಕೌಲಾಲಂಪುರ (ಮಲೇಶ್ಯ), ಸೆ. 19: ಮಲೇಶ್ಯದ ಮಾಜಿ ಪ್ರಧಾನಿ ನಜೀಬ್ ರಝಾಕ್‌ರನ್ನು ಬುಧವಾರ ಬಂಧಿಸಲಾಗಿದೆ. ಅವರ ವಿರುದ್ಧ ‘1 ಮಲೇಶ್ಯ ಡೆವಲಪ್‌ಮೆಂಟ್ ಬರ್ಹಾದ್ (1ಎಂಡಿಬಿ)’ ನಿಧಿಯಲ್ಲಿ ಅವ್ಯವಹಾರ ನಡೆಸಿದ ಆರೋಪವನ್ನು ಹೊರಿಸಲಾಗಿದೆ.

ಸರಕಾರಿ ಒಡೆತನದ ಅಭಿವೃದ್ಧಿ ಕಂಪೆನಿಯಲ್ಲಿ ಸರಕಾರ ಹೂಡಿಕೆ ಮಾಡಿದ ಹಣದ ಪೈಕಿ 628 ಮಿಲಿಯ ಡಾಲರ್ (ಸುಮಾರು 4,500 ಕೋಟಿ ರೂಪಾಯಿ) ನಜೀಬ್ ರಝಾಕ್‌ರ ಖಾಸಗಿ ಬ್ಯಾಂಕ್ ಖಾತೆಗಳಲ್ಲಿ ಪತ್ತೆಯಾಗಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಸರಕಾರಿ ಹೂಡಿಕೆ ನಿಧಿಯಿಂದ ನಜೀಬ್ ಮತ್ತು ಅವರ ಆಪ್ತರು ಭಾರೀ ಪ್ರಮಾಣದಲ್ಲಿ ಹಣ ಲೂಟಿ ಮಾಡಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಅವರು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸೋಲನುಭವಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News