×
Ad

ನಟಿ ಮೇಲೆ ಹಲ್ಲೆ: ಆರೋಪ

Update: 2018-09-19 23:17 IST

ಬೆಂಗಳೂರು, ಸೆ.19: ಕನ್ನಡ ಸಿನೆಮಾವೊಂದರಲ್ಲಿ ನಟಿಸಿದ್ದ ಆಶ್ರೀನ್ ಮೆಹ್ತಾ ಎಂಬಾಕೆಯ ಮೇಲೆ ಆಟೊ ಚಾಲಕನೊಬ್ಬ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಆಶ್ರೀನ್ ಮೆಹ್ತಾ, ಕೆಲಸದ ನಿಮಿತ್ತ ನಗರದ ಉತ್ತರಹಳ್ಳಿಗೆ ಆಟೊದಲ್ಲಿ ತೆರಳಿದ್ದಾರೆ. ಈ ವೇಳೆ ಆಟೊ ಚಾಲಕ ಹೆಚ್ಚಿನ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ. ಈ ವಿಚಾರವಾಗಿ ಚಾಲಕ ಹಲ್ಲೆ ನಡೆಸಿ, ನಿಂದನೆ ಮಾಡಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News