ಬೆಂಗಳೂರು: ಸೆ. 26 ರಿಂದ ಖಗೋಳಶಾಸ್ತ್ರ ಕುರಿತ ಕಮ್ಮಟ

Update: 2018-09-19 17:53 GMT

ಬೆಂಗಳೂರು, ಸೆ.19: ಶಾಲಾ ಶಿಕ್ಷಕರು, ವಿಜ್ಞಾನ ಸಂವಹನಕಾರರು ಮತ್ತು ಖಗೋಳಾಸಕ್ತರಿಗಾಗಿ ಜವಾಹರ್ ಲಾಲ್ ನೆಹರು ತಾರಾಲಯವು ಕಮ್ಮಟವನ್ನು ಏರ್ಪಡಿಸಿದೆ. ಭಾಷಾ ಮಾಧ್ಯಮ ಕನ್ನಡ, ಕಮ್ಮಟದ ಮೊದಲ ಭಾಗ ಸೆ.26 ರಿಂದ 28 ರವರೆಗೆ ಬೆಳಗ್ಗೆ 10.30 ರಿಂದ ಸಂಜೆ 7.30ರವರೆಗೆ ನಗರದ ಜವಾಹರ್ ಲಾಲ್ ನೆಹರು ತಾರಾಲಯ, ಟಿ. ಚೌಡಯ್ಯ ರಸ್ತೆ, ಹೈ ಗ್ರೌಂಡ್ಸ್, ಬೆಂ.01 ಇಲ್ಲಿ ನಡೆಯಲಿದೆ.

ಎರಡನೆಯ ಭಾಗ ನವೆಂಬರ್‌ನಲ್ಲಿ ನಡೆಯಲಿದೆ. ಆಸಕ್ತರು ಎರಡೂ ಭಾಗಗಳಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಬರಿಗಣ್ಣಿನಿಂದ ಆಕಾಶ ಪರಿಚಯ, ಆಕಾಶಕಾಯಗಳ ಚಲನೆಯನ್ನು ತಿಳಿಸಿಕೊಡುವ ಚಟುವಟಿಕೆಗಳು ಮತ್ತು ನಕ್ಷತ್ರ ಫಲಕವನ್ನು ಬಳಸುವ ವಿಧಾನ-ಹೀಗೆ ಖಗೋಳ ವಿಜ್ಞಾನದ ಮೂಲತತ್ವಗಳನ್ನು ತಿಳಿಸಿಕೊಡುವುದು ಈ ಕಮ್ಮಟದ ಉದ್ದೇಶವಾಗಿದೆ. ಇದೇ ವೇಳೆ ಕ್ಯಾಲೆಂಡರ್ ಪರಿಕಲ್ಪನೆ, ಗ್ರಹಣಗಳು, ಸೌರ ಮಂಡಲದ ಮಾದರಿ ಮುಂತಾದವುಗಳ ಚಾರಿತ್ರಿಕ ಬೆಳವಣಿಗೆಯನ್ನೂ ವಿವರಿಸಲಾಗುವುದು.

ಕಮ್ಮಟದಲ್ಲಿ ಭಾಗವಹಿಸಲು ಇಚ್ಫಿಸುವವರು ಸೆ.23ರ ರೊಳಗೆ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಮೊದಲು ಬಂದವರಿಗೆ ಆದ್ಯತೆ. ಒಟ್ಟು 30 ಅಭ್ಯರ್ಥಿಗಳಿಗೆ ಅವಕಾಶ. ಭಾಗವಹಿಸುವವರಿಗೆ ಯಾವುದೇ ಭತ್ತೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ದೂ. 2227 9725/222 6084 ಅಥವಾ www.taralaya.org ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News