ಕೆ.ಎಸ್.ನಿಸಾರ್ ಅಹಮದ್ ಕವನಗಳು ಮಲಯಾಳಂಗೆ ಅನುವಾದ: ಸೆ.23 ರಂದು ಲೋಕಾರ್ಪಣೆ

Update: 2018-09-20 15:35 GMT
ನಾಡೋಜ ಕೆ.ಎಸ್.ನಿಸಾರ್ ಅಹಮದ್

ಬೆಂಗಳೂರು, ಸೆ. 20: ನಾಡೋಜ ಕೆ.ಎಸ್.ನಿಸಾರ್ ಅಹಮದ್ ಅವರ ಆಯ್ದ ಕವನಗಳನ್ನು ಮಲಯಾಳಂಗೆ ಡಾ.ಪಾರ್ವತಿ ಜಿ.ಐತಾಳ್ ಅನುವಾದಿಸಿರುವ ‘ನಿಸಾರಿಂಡೆ 75 ಕವಿತಕಳ್’ ಕವನ ಸಂಕಲವನ್ನು ಸೆ.23ರಂದು ಇಂದಿರಾನಗರದಲ್ಲಿ ಲೋಕಾರ್ಪಣೆ ಮಾಡುವುದಾಗಿ ಈಸ್ಟ್ ಕಲ್ಚರಲ್ ಅಸೋಸಿಯೇಷನ್ ತಿಳಿಸಿದೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಸಾಹಿತ್ಯ ವೇದಿಕೆ ಅಧ್ಯಕ್ಷ ಜಯರಾಜ್ ಮೆನನ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಪುಸ್ತಕ ಲೋಕಾರ್ಪಣೆ ಮಾಡಲಿದ್ದು, ಕವಿ ಪಿ.ಕೆ.ಗೋಪಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಡಾ.ಬಾಲಕೃಷ್ಣನ್, ರಾಜ್ಯ ಹಾಗೂ ಕೇರಳದ ಕವಿಗಳಿಂದ ಮಲಯಾಳಂ ಕವಿತೆಗಳ ವಾಚನ ಕಾರ್ಯಕ್ರಮವನ್ನು ಮಧ್ಯಾಹ್ನ 2.30ಕ್ಕೆ ಏರ್ಪಡಿಸಲಾಗಿದೆ ಎಂದು ಹೇಳಿದರು.

ಕೆ.ಎಸ್.ನಿಸಾರ್ ಅಹಮದ್‌ರವರ ನಿತ್ಯೋತ್ಸವ, ಕುರಿಗಳು ಸಾರ್ ಕುರಿಗಳು, ಗಾಂಧಿ ಬಜಾರಿನಲ್ಲಿ ಒಂದು ಸಂಜೆ, ಹಕ್ಕಿಗಳು, ನಾನೊಬ್ಬ ಪರಕೀಯ ಸೇರಿದಂತೆ ಪ್ರಮುಖ ಕೃತಿಗಳ ಆಯ್ದ ಕವನಗಳು 'ನಿಸಾರಿಂಡೆ 75 ಕವಿತಕಳ್' ಕೃತಿಯಲ್ಲಿವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News