ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಮಕ್ಕಳ ನೆರವಿಗಾಗಿ ಜಾಥಾ

Update: 2018-09-20 17:31 GMT

ಬೆಂಗಳೂರು, ಸೆ. 20: ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಮಕ್ಕಳ ನೆರವಿಗಾಗಿ ನಮ್ಮೊಂದಿಗೆ ಹೆಜ್ಜೆ ಹಾಕಿ ಅಭಿಯಾನವನ್ನು ಸೆ.23ರ ಬೆಳಗ್ಗೆ 7ಗಂಟೆಗೆ ಕಂಠೀರವ ಕ್ರೀಡಾಂಗಣದಿಂದ ಕಬ್ಬನ್ ಉದ್ಯಾನದವರೆಗೂ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಾಯಿಬಿಸಾ ಸಂಸ್ಥೆಯ ಅಧ್ಯಕ್ಷೆ ದೀ ಜಾನ್ ಜಯಾ ವಾಹಿ ತಿಳಿಸಿದ್ದಾರೆ.

ಈ ಕುರಿತು ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿ ಗಂಟೆಗೊಮ್ಮೆ 4 ಅತ್ಯಾಚಾರ ಪ್ರಕರಣಗಳೊಂದಿಗೆ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳು ಕ್ರೂರ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಈ ಮುದ್ದು ಕಂದಮ್ಮಗಳು ಜೀವನವನ್ನು ನಿರ್ಮಿಸಿಕೊಳ್ಳಲು, ಅವರ ಕನಸು ನನಸಾಗಿಸಲು ನಾವು ಸಹಾಯ ಮಾಡಬೇಕೆಂದು ಭಾವುಕರಾದರು.

ಅವಳೊಂದಿಗೆ ನಾಲ್ಕು ಹೆಜ್ಜೆ ಹಾಕೋಣ, ಅವಳ ಬದುಕಿನಲ್ಲಿ ಬೆಳಕು ಮೂಡಿಸಲು ಮುಂದಡಿ ಇಡೋಣ, ಒಂದು ಉದಾತ್ತ ಉದ್ದೇಶಕ್ಕೆ ಬೆಂಬಲ ನೀಡಿ ಎಂದು ಅವರು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 93412 19442 ಅನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News