ಫಿಫಾ ರ್ಯಾಂಕಿಂಗ್: ಫ್ರಾನ್ಸ್‌ನೊಂದಿಗೆ ಅಗ್ರಸ್ಥಾನ ಹಂಚಿಕೊಂಡ ಬೆಲ್ಜಿಯಂ

Update: 2018-09-20 18:38 GMT

ಲಾಸನ್ನೆ, ಸೆ.20: ಬೆಲ್ಜಿಯಂ ತಂಡ ಗುರುವಾರ ಬಿಡುಗಡೆಯಾದ ಫಿಫಾ ರ್ಯಾಂಕಿಂಗ್‌ನಲ್ಲಿ ವಿಶ್ವ ಚಾಂಪಿಯನ್ ಫ್ರಾನ್ಸ್ ತಂಡದೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದೆ. 25 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಮೊದಲ ಸ್ಥಾನವನ್ನು ಎರಡು ತಂಡಗಳು ಹಂಚಿಕೊಂಡಿವೆ.

ಬೆಲ್ಜಿಯಂ ತಂಡ ಐಸ್‌ಲ್ಯಾಂಡ್ ವಿರುದ್ಧ ಮೊದಲ ಆವೃತ್ತಿಯ ನೇಶನ್ಸ್ ಲೀಗ್ ಸ್ಪರ್ಧೆ ಸೇರಿದಂತೆ ಎರಡು ಪಂದ್ಯದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಒಟ್ಟು 1,729 ಅಂಕ ಗಳಿಸಿ ಫ್ರಾನ್ಸ್(1,729) ತಂಡದೊಂದಿಗೆ ಅಗ್ರಸ್ಥಾನ ಪಡೆದಿದೆ. ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಬೆಲ್ಜಿಯಂ ತಂಡ ಫ್ರಾನ್ಸ್‌ಗೆ ಸೋಲುಂಡಿತ್ತು.

ಅಗ್ರ-10ರಲ್ಲಿ ಒಂದು ಬದಲಾವಣೆಯಾಗಿದ್ದು, ಡೆನ್ಮಾರ್ಕ್(10ನೇ ಸ್ಥಾನ)ಒಂದು ಸ್ಥಾನ ಕಳೆದುಕೊಂಡಿದೆ. ಸ್ಪೇನ್ 9ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News