ಇನ್ನು ಮುಂದೆ ಈ ಫೋನ್ ಗಳಲ್ಲಿ ವಾಟ್ಸ್ಯಾಪ್ ಬಳಕೆ ಸಾಧ್ಯವಿಲ್ಲ

Update: 2018-09-21 10:01 GMT

ಹೊಸದಿಲ್ಲಿ, ಸೆ.21: ಐಒಎಸ್-6 ಸಪೋರ್ಟ್ ಹೊಂದಿದ ಐಫೋನ್ ಗಳಿಗೆ ವಾಟ್ಸ್ಯಾಪ್ ಸೇವೆಗಳು ಇತ್ತೀಚೆಗೆ  ಅಂತ್ಯಗೊಳಿಸಲಾಗಿದ್ದರೆ, ಸೆಪ್ಟೆಂಬರ್ 20ರಿಂದ ಐಒಎಸ್7 ಸಪೋರ್ಟ್ ಹೊಂದಿದ ಐಫೋನ್ ಗಳಿಗೂ ವಾಟ್ಸ್ಯಾಪ್ ಸೌಲಭ್ಯ ದೊರೆಯುವುದಿಲ್ಲ.

ಐಒಎಸ್ 7 ಸಪೋರ್ಟ್ ಹೊಂದಿದ ಐಫೋನ್ ಹೊಂದಿರುವವರು ಇನ್ನು ಮುಂದೆ ವಾಟ್ಸ್ಯಾಪ್ ಅನ್ನು ಡೌನ್‍ಲೋಡ್ ಮಾಡಲು ಸಾಧ್ಯವಿಲ್ಲ. ಆದರೆ ಈಗಾಗಲೇ ತಮ್ಮ ಐಫೋನ್ 4ಗಳಲ್ಲಿ ವಾಟ್ಸ್ಯಾಪ್ ಅಳವಡಿಸಿರುವವರಿಗೆ ಈ ಹೊಸ ನಿಯಮ ಅನ್ವಯವಾಗದು. ಹೊಸದಾಗಿ ಡೌನ್‍ಲೋಡ್ ಮಾಡುವುದು ಮಾತ್ರ ಇಂತಹ ಸಾಧನಗಳನ್ನು ಹೊಂದಿದವರಿಗೆ ಸಾಧ್ಯವಿಲ್ಲ.

ಐಫೋನ್ 4 ಈಗಲೂ ಐಒಎಸ್8 ಸಪೋರ್ಟ್ ಹೊಂದಿದ ಕಂಪೆನಿಯ ಕೊನೆಯ ಫೋನ್ ಆಗಿದೆ. ಆದರೆ ಎಲ್ಲಾ ಐಫೋನ್4 ಬಳಕೆದಾರರು ವಾಟ್ಸ್ಯಾಪ್ ಅನ್ನು 2020ರ ತನಕ ಉಪಯೋಗಿಸಬಹುದಾದರೂ ಅವರಿಗೆ ಈ ಆ್ಯಪ್ ಅನ್ನು ಮರು ಇನ್‍ಸ್ಟಾಲ್ ಮಾಡುವುದು ಅಥವಾ ಅಪ್‍ಡೇಟ್ ಮಾಡುವುದು ಅಸಾಧ್ಯ.

ಫೆಬ್ರವರಿ 1, 2020ರ ನಂತರ ವಾಟ್ಸ್ಯಾಪ್ ಐಒಎಸ್ 7 ಮತ್ತು ಹಳೆಯ ಅವತರಣಿಕೆಗಳಲ್ಲಿ ಕಾರ್ಯನಿರ್ವಹಿಸುವುದು ನಿಲ್ಲಿಸಲಿದೆ.

ನೋಕಿಯಾ ಸಿಂಬಿಯನ್ ಎಸ್ 60,  ವಿಂಡೋಸ್ ಫೋನ್ 8.0, ಬ್ಲ್ಯಾಕ್‍ಬೆರ್ರಿ ಒಎಸ್ ಮತ್ತು ಹಳೆಯ ತಂತ್ರಜ್ಞಾನಗಳ ಆಧರಿತ ಸಾಧನಗಳಲ್ಲಿ ವಾಟ್ಸ್ಯಾಪ್ ಕಾರ್ಯನಿರ್ವಹಿಸುವುದು ಈಗಾಗಲೇ ನಿಂತಿದೆ. ಅಂತೆಯೇ ಆಂಡ್ರಾಯ್ಡ್ 2.3.7 ಮತ್ತು ಹಳೆಯ ಅವತರಣಿಕೆಗಳಿಗೂ ಫೆಬ್ರವರಿ 1, 2020ರ ನಂತರ ವಾಟ್ಸ್ಯಾಪ್ ಸಪೋರ್ಟ್ ಅಂತ್ಯಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News