"ಕೇಂದ್ರ ಸರಕಾರ ಮುಯ್ಯಿ ತೀರಿಸಲಿದೆ ಎಂದು ಹೇಳುವುದು ಸರಿಯಲ್ಲ"

Update: 2018-09-21 14:03 GMT

ಬೆಂಗಳೂರು, ಸೆ. 21: ‘ನಾವು ಎಲ್ಲದ್ದಕ್ಕೂ ಪ್ರಧಾನಿ ಹಾಗೂ ಕೇಂದ್ರ ಸರಕಾರದ ಹೆಸರನ್ನು ಎಳೆದು ತರುವುದು ಸಲ್ಲ. ನಮ್ಮ ಸಣ್ಣ ಉದ್ದೇಶಗಳಿಗಾಗಿ ಪ್ರಧಾನಿ ಹೆಸರು ಬಳಸುವುದು, ಅವರ ಘನತೆ ಕಡಿಮೆ ಮಾಡುವುದು, ಕೇಂದ್ರ ಸರಕಾರ ಮುಯ್ಯಿ ತೀರಿಸಲಿದೆ ಎನ್ನುವಂತೆ ಬಿಂಬಿಸುವುದು ಸರಿಯಲ್ಲ’ ಎಂದು ಪರಿಷತ್ತಿನ ಬಿಜೆಪಿ ಸದಸ್ಯ ಲೆಹರ್ ಸಿಂಗ್, ಬಿಎಸ್‌ವೈ ಹೇಳಿಕೆಗೆ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಪಕ್ಷಗಳನ್ನು ಎದುರಿಸಲು ಪ್ರಧಾನಿ ಹೆಸರು ಅಥವಾ ಕೇಂದ್ರ ಸಂಸ್ಥೆಗಳ ಹೆಸರನ್ನು ಎಳೆದು ತರುವ ಅಧಿಕಾರವನ್ನು ಪಕ್ಷವು ಯಾರಿಗೂ ನೀಡಿಲ್ಲ ಎನ್ನುವುದನ್ನು ನನ್ನ ಭಾವನೆಯಾಗಿದೆ. ಕಾನೂನನ್ನು ಅತಿಕ್ರಮಿಸಿದವರು ಯಾರೇ ಇರಲಿ, ಈ ದೇಶದ ಕಾನೂನಿನ ಅನ್ವಯವೇ ಪರಿಣಾಮ ಎದುರಿಸಬೇಕಾಗುತ್ತದೆ. ಹೊರತು ಯಾರೋ ವ್ಯಕ್ತಿಗಳ ಅಭಿಲಾಶೆ ಅಥವಾ ಬಯಕೆಗಳಿಗ ತಕ್ಕಂತೆ ಅಲ್ಲ ಎಂದು ಅವರು ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಸನ್ನದ್ಧಗೊಳ್ಳುತ್ತಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಕೇಂದ್ರ ನಾಯಕತ್ವದ ಗಮನ ವಿಚಲಿತಗೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಗೋವಾ ರಾಜ್ಯದಲ್ಲಿ ರಾಜಕೀಯ ಸವಾಲುಗಳನ್ನು ಎದುರಿಸುವ ಜೊತೆಗೆ ಪಕ್ಷವು ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್‌ಗಡ ಮತ್ತು ತೆಲಂಗಾಣ ಸೇರಿ ನಾಲ್ಕು ರಾಜ್ಯಗಳ ಚುನಾವಣೆ ಎದುರಿಸಬೇಕಿದೆ ಎಂದು ಅವರು ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News