ಪರಿಸರ ಸ್ನೇಹಿ ವಾಹನಗಳಿಗೆ ಹೆಚ್ಚಿನ ಆದ್ಯತೆ ಸಿಗಲಿ: ಆರ್.ಅಶೋಕ್

Update: 2018-09-21 14:31 GMT

ಬೆಂಗಳೂರು, ಸೆ.21: ಭವಿಷ್ಯದಲ್ಲಿ ಪೆಟ್ರೋಲ್-ಡೀಸೆಲ್ ವಾಹನಗಳಿಗಿಂತ ಪರಿಸರ ಸ್ನೇಹಿ ವಿದ್ಯುತ್ ಆಧಾರಿತ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು.

ಶುಕ್ರವಾರ ಜಯನಗರದ 5ನೆ ಬ್ಲಾಕ್‌ನಲ್ಲಿರುವ ಚಂದ್ರಗುಪ್ತ ವೌರ್ಯ ಆಟದ ಮೈದಾನದಲ್ಲಿ ಪ್ರತಿಷ್ಠಿತ ಕಂಪೆನಿಗಳು ತಯಾರಿಸಿದ ಇ-ಎಲೆಕ್ಟ್ರಾನಿಕ್ ಆಟೋಗಳು, ಸೈಕಲ್‌ಗಳು ಮತ್ತು ಇತರೆ ಮಾದರಿಯ ವಾಹನಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮುಂದಿನ 5ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯ ವಾಹನಗಳ ಪ್ರಮಾಣ ತಗ್ಗಲಿದ್ದು, ವಿದ್ಯುತ್ ಆಧಾರಿತ ವಾಹನಗಳೆ ಹೆಚ್ಚು ಬಳಕೆಗೆ ಬರಲಿದೆ. ಪೆಟ್ರೋಲ್ ಆಧರಿತ ವಾಹನಗಳು ಹೆಚ್ಚು ಹೊಗೆ ಸೂಸುವುದರಿಂದ ಪರಿಸರ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಹೀಗಾಗಿ ಜನತೆ ಪರಿಸರ ಸ್ನೇಹಿ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವೋಲ್ವ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ, ಶಾಸಕರಾದ ರವಿಸುಬ್ರಹ್ಮಣ್ಯ, ಉದಯ ಗರುಡಾಚಾರ್, ಸೋಮಣ್ಣ, ಸೌಮ್ಯಾರೆಡ್ಡಿ, ಮಾಜಿ ಶಾಸಕಿ ತಾರಾ, ಪಾಲಿಕೆ ಸದಸ್ಯೆ ಮಾಲತಿ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News