ಸೆ.28 ರಂದು ದೇಶಾದ್ಯಂತ ಔಷಧಿ ಅಂಗಡಿಗಳು ಬಂದ್

Update: 2018-09-21 16:10 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.21: ದೇಶದಲ್ಲಿ ವ್ಯಾಪಕವಾಗುತ್ತಿರುವ ಆನ್‌ಲೈನ್ ಔಷಧ ಮಾರಾಟವನ್ನು ವಿರೋಧಿಸಿ ಔಷಧಿ ವ್ಯಾಪಾರಿಗಳ ಸಂಘವು ಸೆ.28ರಂದು ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.

ವಾಲ್‌ಮಾರ್ಟ್, ಫ್ಲಿಪ್‌ಕಾರ್ಟ್ ಸೇರಿದಂತೆ ಹಲವು ಕಂಪನಿಗಳು, ಆನ್‌ಲೈನ್ ಮೂಲಕ ಔಷಧಿ ವ್ಯಾಪಾರ ವಹಿವಾಟು ಮಾಡುತ್ತಿರುವುದರಿಂದ ಡಿ ಫಾರ್ಮಸಿ ಓದಿ ಅಧಿಕೃತವಾಗಿ ಔಷಧಿ ಅಂಗಡಿಗಳನ್ನು ತೆರೆದಿರುವ ವ್ಯಾಪಾರಿಗಳು ಮತ್ತು ಅವರ ಕುಟುಂಬಗಳ ಬೀದಿಗೆ ಬೀಳಲಿವೆ ಎಂದು ಔಷಧಿ ವ್ಯಾಪಾರಿಗಳ ಸಂಘವು ಆರೋಪಿಸಿದೆ.

ವೈದ್ಯಕೀಯ ಕ್ಷೇತ್ರದ ಜ್ಞಾನವಿಲ್ಲದವರು ಆನ್‌ಲೈನ್ ಮೂಲಕ ಆರ್ಡರ್ ತೆಗೆದುಕೊಂಡು ಔಷಧಿಗಳನ್ನು ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಶೇ.20ರಷ್ಟು ರಿಯಾಯಿತಿ ಸಿಗಲಿದೆ ಎಂಬ ಏಕೈಕ ಕಾರಣಕ್ಕೆ ಗ್ರಾಹಕರು ಆನ್‌ಲೈನ್ ಬಲೆಗೆ ಬಿದ್ದಿದ್ದಾರೆ. ಇದು ಅತ್ಯಂತ ಅವೈಜ್ಞಾನಿಕ ಪದ್ಧತಿಯಾಗಿದೆ. ರೋಗಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸಂಘವು ಅಭಿಪ್ರಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News