×
Ad

ಸೆ.24: ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗಾಗಿ ಪ್ರತಿಭಟನೆ

Update: 2018-09-21 22:02 IST

ಬೆಂಗಳೂರು, ಸೆ. 21: ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ‘ಸಮಾನ ಕೆಲಸಕ್ಕೆ ಸಮಾನ ವೇತನ’ ನೀಡಬೇಕೆಂದು 6ನೆ ವೇತನ ಪಿಂಚಣಿ ಸೌಲಭ್ಯ ಜಾರಿಗಾಗಿ ಒತ್ತಾಯಿಸಿ ಸೆ.24ರಂದು ಸ್ವಾತಂತ್ರ ಉದ್ಯಾನವನದಲ್ಲಿ ರಾಜ್ಯ ಅರಣ್ಯ ಇಲಾಖೆ ಕ್ಷೇಮಾಭಿವೃದ್ಧಿ ನೌಕರರು ಹಾಗೂ ಪಿಸಿಪಿ ವಾಹನ ಚಾಲಕ ಸಂಘವು ಪ್ರತಿಭಟನೆ ಮಾಡುವುದಾಗಿ ತಿಳಿಸಿದೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ಜೆ.ಎನ್.ನಾಗರಾಜುನಾಯಕ ಮಾತನಾಡಿ, 13ಸಾವಿರ ನೌಕರರು ಸರಕಾರದ ನಾನಾ ಇಲಾಖೆಗಳಲ್ಲಿ 30 ವರ್ಷಗಳಿಂದ ದಿನಗೂಲಿ ನೌಕರರಾಗಿದ್ದು, ಯಾವುದೇ ಸೌಲಭ್ಯ ಪಡೆಯದೆ ಖಾಯಂ ಸರಕಾರಿ ನೌಕರರು ಪಡೆಯುವ ಸಂಬಳಕ್ಕಿಂತ ಅರ್ಧ ಸಂಬಳ ಪಡೆಯುತ್ತಿರುವ ನಮ್ಮನ್ನು ದಿನಗೂಲಿ ನೌಕರರ ಸೇವೆಯ ಖಾಯಂ ಹಣೆಪಟ್ಟಿ ಅಂಟಿಸುವ ಮೂಲಕ ಕ್ಷೇಮಾಭಿವೃದ್ಧಿ ಹೆಸರಿನಲ್ಲಿ ಷೋಷಣೆ ಸರಕಾರ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಯಲ್ಲಿ ಹುದ್ದೆ ವೇತನ ತಾರತಮ್ಯವಾಗಿದ್ದು ಕಾವಲುಗಾರ 9,600 ಪಡೆದರೆ, ಅರಣ್ಯ ವೀಕ್ಷಕ 10,400 ಪಡೆಯುತ್ತಿದ್ದು, ಎರಡು ಹುದ್ದೆಗಳ ಮೂಲ ವೀಕ್ಷಕ ಆಗಿರುವುದರಿಂದ ಮೂಲ ವೇತನ 10,400 ಆಗಬೇಕು. ಅಲ್ಲದೆ, ಕಾಡು ಪ್ರಾಣಿಗಳ ಹಲ್ಲೆಗೊಳಗಾಗಿ ಮೃತ ಪಟ್ಟವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಕಚೇರಿ ಮೈಸೂರು ಹಾಗೂ ಶಿವಮೊಗ್ಗ ಅರಣ್ಯ ಪರಿಸರ ಜಾಗೃತಿ ಆಂದೋಲನ, ದಕ್ಷ ಅಧಿಕಾರಿ ದಿ.ಮಣಿಕಂದನ್‌ರವರ ಸ್ಮರಣಾರ್ಥ ಸಾಲುಮರದ ತಿಮ್ಮಕ್ಕ ಹಾಗೂ ಅರಣ್ಯ ಪರಿಸರ ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮವನ್ನು ಪ್ರತಿಭಟನೆಯ ನಂತರ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News