ರೋಗಿಯ ಸುರಕ್ಷತೆ ಖಾತ್ರಿ ಸ್ಟಾಸಿಸ್‌ನಿಂದ ಸಾಧ್ಯ: ಅರವಳಿಕೆ ತಜ್ಞ ಡಾ.ರಾಮಚಂದ್ರ

Update: 2018-09-21 16:49 GMT

ಬೆಂಗಳೂರು, ಸೆ. 21: ಹೆರಿಗೆಯ ನಂತರ ತಾಯಿ-ಮಗುವಿನ ಹಾರೈಕೆ ಹಾಗೂ ಅಪಾಯ ಸೂಚಕವಾದ ಹೆಚ್ಚಿನ ರಕ್ತದೊತ್ತಡ ಸೇರಿದಂತೆ ರೋಗಿಯ ಸುರಕ್ಷತೆ ಖಾತ್ರಿ ಮಾಡಿಕೊಳ್ಳಲು ‘ಸ್ಟಾಸಿಸ್’ ನೆರವಾಗಲಿದೆ ಎಂದು ಅರವಳಿಕೆ ತಜ್ಞ ಡಾ.ಎಂ.ಎ. ರಾಮಚಂದ್ರ ಹೇಳಿದ್ದಾರೆ.

ವೈದ್ಯರು ರೋಗಿಗಳನ್ನು ದೂರದಿಂದಲೇ ಪರೀಕ್ಷಿಸುವುದಕ್ಕಾಗಿ ‘ಸ್ಟಾಸಿಸ್ ಆ್ಯಪ್’ ಬಳಸುತ್ತಿದ್ದಾರೆ. 2017ರಲ್ಲಿ ಟೆಕ್‌ಎಮರ್ಜ್ ಕಾರ್ಯಕ್ರಮದ ಮೂಲಕ ವಿಶ್ವ ಬ್ಯಾಂಕ್ ಸಮೂಹದ ನಿಧಿ ನೆರವಿನ ಬಳಕೆ ಸಾಧ್ಯತೆಯ ಅಧ್ಯಯನಕ್ಕಾಗಿ ಸ್ಟಾಸಿಸ್‌ನೊಂದಿಗೆ ಕ್ಲೌಡ್‌ನೈನ್ ಪಾಲುದಾರಿಕೆ ಮಾಡಿಕೊಂಡಿತ್ತು ಎಂದು ತಿಳಿಸಿದ್ದಾರೆ.

‘ಸ್ಟಾಸಿಸ್‌ನಂತಹ ನವೀನತೆಯ ಸಂಸ್ಥೆಗಳು ಕ್ಲೌಡ್‌ನೈನ್‌ನಂತಹ ಆಸ್ಪತ್ರೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಬಳಸಿಕೊಳ್ಳಲು ನೆರವಾಗುತ್ತವೆ. ನಮ್ಮ ಆಸ್ಪತ್ರೆ ಜಾಲದಲ್ಲಿ ಸ್ಟಾಸಿಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ನಾವು ಹರ್ಷಗೊಂಡಿದ್ದೇವೆ ಎಂದು ಕ್ಲೌಡ್‌ನೈನ್ ಅಧ್ಯಕ್ಷ ಡಾ.ಕಿಶೋರ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News