ಮುಂಬೈಗೆ ಶರಣಾದ ಕರ್ನಾಟಕ

Update: 2018-09-21 18:49 GMT

ಬೆಂಗಳೂರು, ಸೆ.21: ನಾಯಕ ಅಜಿಂಕ್ಯ ರಹಾನೆ (148) ಹಾಗೂ ಶ್ರೇಯಸ್ ಅಯ್ಯರ್ (110)ಭರ್ಜರಿ ಬ್ಯಾಟಿಂಗ್‌ಗೆ ಕಂಗಾಲಾದ ಕರ್ನಾಟಕ ತಂಡ ಶುಕ್ರವಾರ ನಡೆದ ವಿಜಯ್ ಹಝಾರೆ ಎ ಗುಂಪಿನ ಪಂದ್ಯದಲ್ಲಿ 88 ರನ್‌ಗಳಿಂದ ಸೋಲುಂಡಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 362 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕರ್ನಾಟಕ ಮಯಾಂಕ್ ಅಗರ್ವಾಲ್(66)ಏಕಾಂಗಿ ಹೋರಾಟದ ಹೊರತಾಗಿಯೂ 45 ಓವರ್‌ಗಳಲ್ಲಿ 274 ರನ್‌ಗೆ ಆಲೌಟಾಯಿತು. ಮುಂಬೈ ಪರ ಎಸ್. ಮುಲಾನಿ(71ಕ್ಕೆ4) ಯಶಸ್ವಿ ಬೌಲರ್ ಎನಿಸಿಕೊಂಡರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈಗೆ ಪೃಥ್ವಿ ಶಾ(60) ಹಾಗೂ ರಹಾನೆ(148,150 ಎಸೆತ, 13 ಬೌಂಡರಿ,3 ಸಿಕ್ಸರ್)ಮೊದಲ ವಿಕೆಟ್‌ಗೆ 106 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.

ಶಾ ಔಟಾದ ಬಳಿಕ ಜೊತೆಯಾದ ರಹಾನೆ ಹಾಗೂ ಅಯ್ಯರ್(110, 82 ಎಸೆತ, 5 ಬೌಂಡರಿ,8 ಸಿಕ್ಸರ್)ಎರಡನೇ ವಿಕೆಟ್‌ಗೆ 216 ರನ್ ಜೊತೆಯಾಟ ನಡೆಸಿ ಕರ್ನಾಟಕ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News