ಸೌದಿ ರಾಷ್ಟ್ರೀಯ ದಿನ: ಐಎಸ್ಎಫ್ ವತಿಯಿಂದ ರಕ್ತದಾನ ಶಿಬಿರ

Update: 2018-09-23 05:39 GMT

ರಿಯಾದ್, ಸೆ. 23: ಸೌದಿ ಅರೇಬಿಯಾ 88ನೇ ರಾಷ್ಟ್ರೀಯ ದಿನದ ಅಂಗವಾಗಿ ಇಂಡಿಯನ್ ಸೋಷಿಯಲ್ ಪೋರಂ ಪೂರ್ವ ಪ್ರಾಂತ್ಯದ ಕರ್ನಾಟಕ ಘಟಕವು ಸೌದಿ ಆರೋಗ್ಯ ಖಾತೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಅಲ್ ಹಸ್ಸಾದ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ನಡೆಸಿತು.

ಈ ಶಿಬಿರದಲ್ಲಿ 60ಕ್ಕಿಂತಲೂ ಹೆಚ್ಚು ಭಾರತೀಯ ಅನಿವಾಸಿಗಳು ಪಾಲ್ಗೊಂಡಿದ್ದರು ಮತ್ತು 51 ಅನಿವಾಸಿ ಭಾರತೀಯರು ರಕ್ತದಾನ ಮಾಡಿದ್ದು, ಸೌದಿ ಆರೋಗ್ಯ ಇಲಾಖೆಯು ಇಂಡಿಯನ್ ಸೋಷಿಯಲ್ ಪೋರಂ ಸೇವಾ ಘಟಕಕ್ಕೆ ಅಭಿನಂದನಾ ಪತ್ರ ನೀಡಿತು.

ಇಂಡಿಯನ್ ಸೋಷಿಯಲ್ ಪೋರಂ ಮತ್ತು ರಕ್ತದಾನಿಗಳ ಕೊಡುಗೆಯನ್ನು ಆಸ್ಪತ್ರೆಯ ರಕ್ತದಾನ ವಿಭಾಗದ ಮೇಲ್ವಿಚಾರಕರಾದ ರಾಹಿದ್ ಅಲ್ ನಜ್ಜಾರ್  ಶ್ಲಾಘಿಸುತ್ತಾ "ಅಲ್  ಹಸ್ಸಾದ ಇತಿಹಾಸದಲ್ಲೇ ಭಾರತೀಯರ ರಕ್ತದಾನ ಶಿಬಿರವು ಇದು ಎರಡನೇ ಬಾರಿಯಾಗಿರುತ್ತದೆ. ರಕ್ತದಾನವು ಜೀವ ಉಳಿಸುವ ಪ್ರಕಿಯೆಯಾಗಿದ್ದು, ರಕ್ತದಾನದ ತುಂಬಾ ಆವಶ್ಯಕವಿದ್ದ ಈ ಸಂದರ್ಭದಲ್ಲಿ ನಿಮ್ಮ ಈ ಸಕಾರಾತ್ಮಕ ಕೊಡುಗೆಯನ್ನು ನಾನು ತುಂಬಾ ಅಭಿನಂದಿಸುತ್ತೇನೆ" ಎಂದರು.

ಈ ರಕ್ತದಾನ ಶಿಬಿರದ ಯಶಸ್ಸಿಗೆ ಸಹಕರಿಸಿದ ಸೌದಿ ಆರೋಗ್ಯ ಇಲಾಖೆಗೂ ಮತ್ತು ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೂ, ರಕ್ತದಾನವಿತ್ತು ಸಹಕರಿಸಿದ ಅನಿವಾಸಿ ಭಾರತೀಯರಿಗೂ ಇಂಡಿಯನ್ ಸೋಷಿಯಲ್ ಪೋರಂ ಅಲ್ ಹಸ್ಸಾ ಬ್ಲಾಕ್ ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಬುಡೋಳಿ ವಂದಿಸಿದರು.

ಕಾರ್ಯಕ್ರಮದಲ್ಲಿ ಇಂಡಿಯನ್ ಸೋಷಿಯಲ್ ಪೋರಂ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಫಿರೋಝ್ ಉಪಸ್ಥಿತರಿದ್ದರು. ಅಲ್ ಹಸ್ಸಾದ ನಾಯಕರಾದ ಮುಹಮ್ಮದ್ ರಫೀಕ್ ಬುಡೋಳಿ ಮತ್ತು ಅಬ್ದುಲ್ ಖಾದರ್ ಮರವೂರು ಕಾರ್ಯಕ್ರಮ ರೂಪಿಸಿದ್ದು, ಕಾರ್ಯಕರ್ತರಾದ ನವಾಝ್ ಅಡ್ಡೂರು, ಇಸಾಕ್ ಮಲ್ಲೂರು, ಅಶ್ರಪ್ ಕೊಲ್ಪೆ, ಸತ್ತಾರ್ ಬಜ್ಪೆ, ಇಕ್ಬಾಲ್ ಅಂಕಜಲ್, ಹುಸೈನ್ ಜೋಕಟ್ಟೆ ಶಿಬಿರದ ಯಶಸ್ಸಿಗಾಗಿ ಸಹಕಾರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News