ಆರೋಗ್ಯ ಕರ್ನಾಟಕ: 32,870 ಫಲಾನುಭವಿಗಳಿಗೆ ಚಿಕಿತ್ಸೆ

Update: 2018-09-23 12:53 GMT

ಬೆಂಗಳೂರು, ಸೆ.23: ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಇದುವರೆಗೂ 32,870 ಫಲಾನುಭವಿಗಳು ಚಿಕಿತ್ಸೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮಾರ್ಚ್ 2 ರಿಂದ ಈ ಯೋಜನೆ ಆರಂಭಗೊಂಡಿದ್ದು, ಆರು ತಿಂಗಳ ಅವಧಿಯಲ್ಲಿ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳೆರಡರಲ್ಲೂ ಸೌಲಭ್ಯ ದೊರೆಯುತ್ತಿದೆ. ಈ ಯೋಜನೆಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಉಚಿತ ಹಾಗೂ ಎಪಿಎಲ್ ಕುಟುಂಬಗಳಿಗೆ ಪಾವತಿ ಆಧಾರದಲ್ಲಿ ಚಿಕಿತ್ಸೆ ನೀಡಲಾಗಿದೆ. 6.5 ಕೋಟಿ ಜನರಿಗೆ ಚಿಕಿತ್ಸೆ ನೀಡುವ ಉದ್ದೇಶವನ್ನು ಯೋಜನೆ ಹೊಂದಿದೆ. 1516 ಚಿಕಿತ್ಸಾ ವಿಧಾನಗಳು ಇದರ ವ್ಯಾಪ್ತಿಗೆ ಒಳಪಟ್ಟಿವೆ.  ಈ ಯೋಜನೆಯಡಿ ಹೃದ್ರೋಗ ಚಿಕಿತ್ಸೆಗೆ ಒಳಗಾದವರೆ ಹೆಚ್ಚು. 519 ಖಾಸಗಿ, 381 ಸರಕಾರಿ ಆಸ್ಪತ್ರೆಗಳು ಸೇರಿ ಒಟ್ಟು 900 ಆಸ್ಪತ್ರೆಗಳು ನೋಂದಣಿ ವ್ಯಾಪ್ತಿಗೆ ಒಳಪಟ್ಟಿವೆ ಎಂದು ಪ್ರಕಟಣೆ ತಿಳಿಸಿದೆ. 

ಆಸ್ಪತ್ರೆಗಳಿಗೆ ನೀಡಿದ ಹಣ 33.93 ಕೋಟಿ ರೂ., 32,870 ಚಿಕಿತ್ಸೆ ಪಡೆದವರು, 18,697 ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು, 14,173 ಸರಕಾರಿ ಆಸ್ಪತ್ರೆ ಫಲಾನುಭವಿಗಳು, 6117 ಹೃದಯ ಚಿಕಿತ್ಸೆಗೆ ಒಳಗಾದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News