ಬಾಂಗ್ಲಾಕ್ಕೆ 3 ರನ್‌ಗಳ ರೋಚಕ ಜಯ

Update: 2018-09-24 05:33 GMT
ಮಹ್ಮೂದುಲ್ಲಾ ಪಂದ್ಯಶ್ರೇಷ್ಠ 

ಅಬುಧಾಬಿ , ಸೆ.24: ಏಶ್ಯಕಪ್‌  ಸೂಪರ್ 4 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ ತಂಡ 3 ರನ್‌ಗಳ ರೋಚಕ ಜಯ ಗಳಿಸಿದೆ.
ರವಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಗೆಲುವಿಗೆ 250 ರನ್ ಗಳಿಸಬೇಕಿದ್ದ ಅಫ್ಘಾನಿಸ್ತಾನ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 246 ರನ್ ಗಳಿಸಿತು. ಇದರೊಂದಿಗೆ ಬಾಂಗ್ಲಾ ಮುಂದಿನ ಹಂತಕ್ಕೇರುವ ಅವಕಾಶವನ್ನು ಜೀವಂತವಾಗಿರಿಸಿದೆ.
 ಕೊನೆಯ ಓವರ್‌ನಲ್ಲಿ ಅಫ್ಘಾನಿಸ್ತಾನದ ಗೆಲುವಿಗೆ 8 ರನ್ ಬೇಕಾಗಿತ್ತು. ಆದರೆ ಮುಸ್ತಾಫಿಝುರ್ರಹ್ಮಾನ್ ಕೇವಲ 4 ರನ್ ಬಿಟ್ಟುಕೊಟ್ಟರು. 49.2ನೇ ಓವರ್‌ನಲ್ಲಿ ರಶೀದ್ ಖಾನ್ ಔಟಾಗಿರುವುದು ಅಫ್ಘಾನಿಸ್ತಾನದ ಹಿನ್ನಡೆಗೆ ಕಾರಣವಾಯಿತು. ಹಶ್ಮತುಲ್ಲಾ ಶಾಹಿದಿ (71) , ಮುಹಮ್ಮದ್ ಶಾಝಾದ್ (53), ಮುಹಮ್ಮದ್ ನಬಿ(38), ನಾಯಕ ಅಸ್ಘರ್ ಅಫ್ಘನ್(39), ಸಮಿಯುಲ್ಲಾ ಶೆನ್ವಾರಿ (ಔಟಾಗದೆ 23) ಹೋರಾಟ ಫಲ ನೀಡಲಿಲ್ಲ. ಬಾಂಗ್ಲಾದೇಶ ತಂಡ ಇದಕ್ಕೂ ಮೊದಲು ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 249 ರನ್ ಗಳಿಸಿತ್ತು.
      ಬಾಂಗ್ಲಾದ ಪರ ಗರಿಷ್ಠ ರನ್ ದಾಖಲಿಸಿದ್ದ ಮಹ್ಮೂದುಲ್ಲಾ (74)ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News