ಹಜಾಮ ಪದ ಬಳಸದಂತೆ ಕಾನೂನು ಕ್ರಮಕ್ಕೆ ಆಗ್ರಹ

Update: 2018-09-24 16:47 GMT

ಬೆಂಗಳೂರು, ಸೆ.24: ಹಜಾಮ ಪದ ಬಳಸುವುದನ್ನು ತಡೆಯಲು ಜಾತಿ ನಿಂದನೆ ಕಾಯ್ದೆಯಲ್ಲಿ ಸೇರಿಸಿ, ಅಪರಾಧ ಎಂದು ಪರಿಗಣಿಸಲು ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಸರಕಾರವನ್ನು ಕರ್ನಾಟಕ ರಾಜ್ಯ ಸವಿತಾ ಸಮಾಜ ಆಗ್ರಹಿಸಿದೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷ ಯು.ಕೃಷ್ಣಮೂರ್ತಿ ಮಾತನಾಡಿ, ಸಾರ್ವಜನಿಕರು ಕ್ಷೌರಿಕ ವೃತ್ತಿಯನ್ನು ಹಜಾಮ ಎಂದು ಅವಹೇಳನಕಾರಿಯಾಗಿ ಉಪಯೋಗಿಸುವುದನ್ನು ತಡೆಯಲು ಸರಕಾರ ಸೂಕ್ತವಾದ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಚಿಂತಕರ ಚಾವಡಿ, ಬುದ್ಧಿಜೀವಿಗಳ ಪಡಸಾಲೆ ಎಂದೇ ಹೆಸರು ಗಳಿಸಿರುವ ಕರ್ನಾಟಕ ವಿಧಾನ ಪರಿಷತ್ತಿಗೆ ಕಟ್ಟಕಡೆಯವನಿಗೂ ಒಂದು ಅವಕಾಶ ಎಂಬಂತೆ, ಸವಿತಾ ಸಮಾಜದ ಎಂ.ಸಿ.ವೇಣುಗೋಪಾಲ್‌ರವರನ್ನು ಆಯ್ಕೆ ಮಾಡಿರುವ ಕಾಂಗ್ರೆಸ್ ವರಿಷ್ಠ ಮಂಡಳಿಗೆ ಧನ್ಯವಾದಗಳನ್ನು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News