ಫಿಫಾ: ವರ್ಷದ ಆಟಗಾರ ಯಾರು ಗೊತ್ತೇ?

Update: 2018-09-25 03:53 GMT

ಲಂಡನ್, ಸೆ.25: ಫುಟ್ಬಾಲ್ ಮಾಂತ್ರಿಕರಾದ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೊನೆಲ್ ಮೆಸ್ಸಿ ಅವರ ದಶಕದ ಪಾರಮ್ಯವನ್ನು ಮುರಿದ ಕ್ರೊವೇಷಿಯಾ ಮಿಡ್‌ಫೀಲ್ಡ್ ಆಟಗಾರ ಲೂಕಾ ಮೋಡ್ರಿಕ್ ಈ ವರ್ಷದ ಫಿಫಾ ವರ್ಷದ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ರಿಯಲ್ ಮ್ಯಾಡ್ರಿಡ್ ಕ್ಲಬ್ ಪರ ಮತ್ತು ಕ್ರೊವೇಷಿಯಾ ತಂಡದ ಪರ ಮಿಂಚಿದ್ದ ಮೋಡ್ರಿಕ್, ಮ್ಯಾಡ್ರಿಡ್ ತಂಡ ಸತತ ಮೂರನೇ ಬಾರಿಗೆ ಚಾಂಪಿಯನ್ಸ್ ಲೀಗ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಜತೆಗೆ ಕ್ರೊವೇಷಿಯಾ ತಂಡ ಮೊಟ್ಟಮೊದಲ ಬಾರಿಗೆ ವಿಶ್ವಕಪ್ ಫೈನಲ್ ತಲುಪುವಲ್ಲಿ ನೆರವಾಗಿದ್ದರು.

"ಈ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಇದು ಎಲ್ಲರ ಪರಿಶ್ರಮಕ್ಕೆ ಸಂದ ಗೌರವ. ಹಲವಾರು ಮಂದಿ ಜತೆಯಾಗಿ ನನ್ನ ಬೆಂಬಲಕ್ಕೆ ನಿಂತಿದ್ದರು" ಎಂದು ಮೋಡ್ರಿಕ್ ಹೇಳಿದ್ದಾರೆ.

ಲಿವರ್‌ಪೂಲ್‌ನ ಈಜಿಪ್ಟಿಯನ್ ಮುನ್ಪಡೆ ಆಟಗಾರ ಮುಹಮ್ಮದ್ ಸಲಾಹ್ ಮತ್ತು ರೊನಾಲ್ಡೊ ಅವರನ್ನು ಹಿಂದಿಕ್ಕಿ ಮೋಡ್ರಿಕ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೆಸ್ಸಿ ಸೇರಿದಂತೆ ಯಾರೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಲಿಲ್ಲ. ಹಲವಾರು ವರ್ಷ ಅಗ್ರಸ್ಥಾನಿಗಳಾಗಿದ್ದೂ, ಸಮಾರಂಭದಲ್ಲಿ ಭಾಗವಹಿಸದ ಮುಂಚೂಣಿ ಆಟಗಾರರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News