ಜೂಜು ಅಡ್ಡೆಗಳ ಮೇಲೆ ದಾಳಿ: 1 ಕೋಟಿ ಜಪ್ತಿ, 77 ಜನರ ಬಂಧನ

Update: 2018-09-25 17:08 GMT

ಬೆಂಗಳೂರು, ಸೆ.25: ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದ ಅಡ್ಡೆಗಳ ಮೇಲೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು 77 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದ ತಂಡವು ನಗರದ ಐದು ಕಡೆಗಳಲ್ಲಿ ದಾಳಿ ನಡೆಸಿ 77 ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ 1 ಕೋಟಿಗಿಂತ ಹೆಚ್ಚು ನಗದು ಹಾಗೂ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಇಲ್ಲಿನ ರೆಸಿಡೆನ್ಸಿ ರಸ್ತೆ, ಅಶೋಕ್ ನಗರ, ಜೆ.ಸಿ.ನಗರ, ಬಿ.ನಾರಾಯಣಪುರ ರಿಕ್ರಿಯೇಷನ್ ಕ್ಲಬ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಗಾಂಧಿ ಬಜಾರ್‌ನಲ್ಲಿರುವ ಸ್ಕಿಲ್ ಗೇಮ್ಸ್ ಅಡ್ಡೆಯಲ್ಲಿದ್ದ 63, ಅಶೋಕ್ ನಗರದ ಮೂವರು ಸೇರಿದಂತೆ ಒಟ್ಟು 77 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News