ಆರೋಗ್ಯ ಕರ್ನಾಟಕ ಯೋಜನೆಯಡಿ ಸೇವೆ ಪಡೆದ 33 ಸಾವಿರ ರೋಗಿಗಳು

Update: 2018-09-26 14:22 GMT

ಬೆಂಗಳೂರು, ಸೆ.26: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆರೋಗ್ಯ ಕರ್ನಾಟಕದ ಅಡಿಯಲ್ಲಿ ಇದುವರೆಗೂ 33,636 ರೋಗಿಗಳು ವಿವಿಧ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ.

ಯೊಜನೆಯಲ್ಲಿ ಸರಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 1516 ಚಿಕಿತ್ಸೆ ಒದಗಿಸಲಾಗುತ್ತಿದೆ. ಬಿಪಿಎಲ್ ಕುಟುಂಬಗಳಿಗೆ ಬಹುತೇಕ ಉಚಿತ ಹಾಗೂ ಎಪಿಎಲ್ ಕುಟುಂಬಗಳಿಗೆ ಪ್ಯಾಕೇಜ್ ವೆಚ್ಚದ ಶೇ.30 ರಷ್ಟು ಹಣವನ್ನು ಸರಕಾರ ಭರಿಸುತ್ತಿದೆ.

ಈ ಯೋಜನೆ ಅಡಿಯಲ್ಲಿ ರಾಜ್ಯಾದ್ಯಂತ 33,636 ರೊಗಿಗಳು ಚಿಕಿತ್ಸೆ ಪಡೆದಿದ್ದು, 14510 ಮಂದಿ ಸರಕಾರಿ ಹಾಗೂ 19126 ಜನ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ರೆಫರಲ್ ಆಧಾರದ ಮೇಲೆ ಚಿಕಿತ್ಸೆ ಪಡೆದಿದ್ದಾರೆ. ಆದರೆ, ಚಿಕಿತ್ಸೆ ಪಡೆಯಲು ಮೊದಲು ಸರಕಾರಿ ಆಸ್ಪತ್ರೆಗೆ ತೆರಳಬೇಕಾದ್ದರಿಂದ ಎಪಿಎಲ್ ಕುಟುಂಬದವರು ಹಿಂದೇಟು ಹಾಕುತ್ತಿದ್ದು, ಕೇವಲ 472 ಮಂದಿಯಷ್ಟೇ ಇದರ ಅಡಿ ಚಿಕಿತ್ಸೆ ಪಡೆದಿದ್ದಾರೆ. ಇನ್ನುಳಿದಂತೆ 33156 ಮಂದಿ ಬಿಪಿಎಲ್ ಕುಟುಂಬದವರಾಗಿದ್ದಾರೆ.

3299 ಮಂದಿ ದ್ವಿತೀಯ ಹಂತದ ಸಂಕೀರ್ಣ ಚಿಕಿತ್ಸೆ, 4632 ಮಂದಿ ತುರ್ತು ಚಿಕಿತ್ಸೆ ಹಾಗೂ 25705 ಮಂದಿ ತೃತೀಯ ಹಂತದ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಉಳಿದಂತೆ ಯೊಜನೆಯಲ್ಲಿ ಹೃದಯಸಂಬಂಧಿ ಶಶ್ತ್ರಚಿಕಿತ್ಸೆ(6412), ಮೂತ್ರಪಿಂಡ ಶಸ್ತ್ರಚಿಕಿತ್ಸೆ (5276), ವೈದ್ಯಕೀಯ ಗ್ರಂಥಿ ಚಿಕಿತ್ಸೆ (4642)ಗೆ ಅಧಿಕ ರೋಗಿಗಳು ಒಳಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News