ಕ್ರೀಡೆಯ ಅಭಿವೃದ್ಧಿಗೆ ಸಂಸ್ಥೆಗಳ ಸಹಯೋಗ ಅಗತ್ಯ: ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತ ಸತೀಶ್ ಸಿವಲಿಂಗಮ್

Update: 2018-09-26 14:55 GMT

ಬೆಂಗಳೂರು, ಸೆ. 26: ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳ ಸಹಯೋಗ ಅಗತ್ಯ ಎಂದು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ, ಕ್ರೀಡಾಪಟು ಸತೀಶ್ ಕುಮಾರ್ ಸಿವಲಿಂಗಮ್ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೀಡಾಪಟುವಿನ ಪ್ರಯಾಣ ಏರಿಳಿತದಿಂದ ಕೂಡಿರುತ್ತದೆ. ಗೆಲುವು-ಸೋಲು, ಗಾಯಗಳು ಮತ್ತು ಮಾನಸಿಕ ಬಿಕ್ಕಟ್ಟುಗಳು ಅವರನ್ನು ಕಾಡುತ್ತವೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸಾಧನೆ ಪ್ರದರ್ಶಿಸಬೇಕಾದ ಕ್ರೀಡೆಗಳಲ್ಲಿ ಸತತವಾಗಿ ಉತ್ತಮ ಫಲಿತಾಂಶ ನೀಡಲು ತಕ್ಕುದಾದ ಮನಸ್ಥಿತಿ, ತರಬೇತಿ, ಪೌಷ್ಟಿಕತೆ ಅತ್ಯಂತ ಮುಖ್ಯ ಎಂದು ಹೇಳಿದರು.

ಕ್ರೀಡಾಪಟುಗಳು ದೇಹದಾರ್ಢ್ಯತೆ ಕಾಪಾಡಿಕೊಳ್ಳಲು ಮತ್ತು ಸತತವಾಗಿ ಸಾಧನೆ ಮಾಡಲು ಅತ್ಯಂತ ವೈಜ್ಞಾನಿಕ ಮತ್ತು ಎಚ್ಚರಿಕೆಯ ವಿಧಾನ ಅಗತ್ಯ. ಏಷ್ಯನ್ ಗೇಮ್ಸ್‌ನಲ್ಲಿ ನಾನು ಗಾಯಗೊಂಡ ನಂತರ ಜಕಾರ್ತದ ಆಸ್ಪತ್ರೆಯಲ್ಲಿ ಎರಡು ತಿಂಗಳ ಸಂಪೂರ್ಣ ವಿಶ್ರಾಂತಿಗೆ ಸಲಹೆ ಮಾಡಿದರು. ಆಯುರ್ವೇದ ಚಿಕಿತ್ಸೆಯಿಂದ ನಾನು ಕ್ರೀಡಾ ಪುನರ್ವಸತಿಗೆ ಪ್ರಯತ್ನಿಸಿದೆ. ಈ ಸಂಯೋಜಿತ ಚಿಕಿತ್ಸೆಯ 4 ದಿನಗಳಲ್ಲಿ, ತಜ್ಞರ ಮಾರ್ಗದರ್ಶನದಿಂದ ನೋವು ಗಮನಾರ್ಹವಾಗಿ ಕಡಿಮೆಯಾಯಿತು ಮತ್ತು 10ದಿನಗಳಲ್ಲಿ ನಾನು ಸುಲಭವಾಗಿ ಸುತ್ತಾಡಲು ಸಾಧ್ಯವಾಯಿತು. ಮುಂದಿನ 10 ದಿನಗಳ ಚಿಕಿತ್ಸೆ ಇರುವಾಗಲೇ ನಾನು ಮತ್ತಷ್ಟು ಸದೃಢವಾಗಿ ಹಿಂದಿರುಗಬೇಕೆಂದು ಬಯಸಿದೆ ಮತ್ತು 2020ರ ಒಲಿಂಪಿಕ್ಸ್ ನನ್ನ ಗುರಿಯಾಗಿಸಿಕೊಂಡು ನನ್ನ ಅಭ್ಯಾಸ ಪ್ರಾರಂಭಿಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News