ಇನ್ನು ಕ್ರೀಡೆ, ಸಂಗೀತ ಪ್ರೇಮಿಗಳಿಗೆ ಸೌದಿ ವೀಸಾ

Update: 2018-09-27 05:43 GMT

ರಿಯಾದ್, ಸೆ. 27: ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಬಯಸುವ ವಿದೇಶಿಯರಿಗೆ ಸೌದಿ ಅರೇಬಿಯ ಡಿಸೆಂಬರ್‌ನಿಂದ ವೀಸಾ ನೀಡಲು ಮುಂದಾಗಿದೆ.

ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಮುಂದಾಗಿರುವ ಸೌದಿ ಅರೇಬಿಯ ಮೊದಲ ಬಾರಿ ಈ ಮಾದರಿಯ ವೀಸಾಗಳನ್ನು ನೀಡುತ್ತಿದೆ.

‘‘ಲೈವ್ ಸ್ಪೋರ್ಟ್, ಸಂಗೀತ ಮತ್ತು ಸಂಸ್ಕೃತಿಯ ಅಭಿಮಾನಿಗಳಿಗೆ ಸೌದಿ ಅರೇಬಿಯವು ಮೊದಲ ಬಾರಿ ಗಡಿಗಳನ್ನು ತೆರೆಯುತ್ತಿದೆ. ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸ್ವಾಗತಿಸುವ ಉದ್ದೇಶಕ್ಕಾಗಿಯೇ ನೂತನ ಆನ್‌ಲೈನ್ ವೀಸಾ ಪ್ರಕ್ರಿಯೆಯನ್ನು ಆರಂಭಿಸಲಿದೆ’’ ಎಂದು ಸೌದಿ ಅರೇಬಿಯದ ಮಹಾ ಕ್ರೀಡಾ ಪ್ರಾಧಿಕಾರ ಹೇಳಿದೆ.

ಸದ್ಯ ವಿದೇಶಿ ಕೆಲಸಗಾರರಿಗೆ, ಅವರ ಆಶ್ರಿತರಿಗೆ ಹಾಗೂ ಮಕ್ಕಾ ಮತ್ತು ಮದೀನಾಗಳಿಗೆ ಭೇಟಿ ನೀಡುವ ಯಾತ್ರಿಗಳಿಗೆ ಮಾತ್ರ ಸೌದಿ ಅರೇಬಿಯ ವೀಸಾಗಳನ್ನು ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News