ಕುವೈತ್‌ನ ಗಗನಚುಂಬಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ

Update: 2018-09-27 11:14 GMT

ಕುವೈತ್,ಸೆ.27:ಗುರುವಾರ ಬೆಳಿಗ್ಗೆ ಕುವೈತ್‌ನ ನ್ಯಾಷನಲ್ ಬ್ಯಾಂಕ್ ಆಫ್ ಕುವೈತ್(ಎನ್‌ಬಿಕೆ)ನ ಗಗನಚುಂಬಿ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ಎನ್‌ಬಿಕೆಯ ನಿರ್ಮಾಣ ನಿವೇಶನದಲ್ಲಿ ಈ ಅವಘಡ ಉಂಟಾಗಿದ್ದು,ಅಗ್ನಿಶಾಮಕ ದಳದ ಸಿಬ್ಬಂದಿಗಳು 2,500ಕ್ಕೂ ಅಧಿಕ ಕಾರ್ಮಿಕರನ್ನು ಸುರಕ್ಷಿತವಾಗಿ ತೆರವುಗೊಳಿಸಿ,ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ಯಾಂಕಿನ ಕೆಳ ಅಂತಸ್ತುಗಳಲ್ಲಿ ಕಾಣಿಸಿಕೊಂಡ ಬೆಂಕಿಯು ಶೀಘ್ರವೇ ಮೇಲಿನ ಅಂತಸ್ತುಗಳಿಗೂ ವ್ಯಾಪಿಸಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News