×
Ad

ಬೆಂಗಳೂರು: ಸೆ.30ರಿಂದ ಐತಿಹಾಸಿಕ ಕಾರ್ ಪ್ರದರ್ಶನ

Update: 2018-09-27 22:19 IST

ಬೆಂಗಳೂರು, ಸೆ.27: ಐತಿಹಾಸಿಕ ವಾಹನಗಳ ಭಾರತದ ಒಕ್ಕೂಟ ಸಂಸ್ಥೆಯು ಅಂತರ್‌ರಾಷ್ಟ್ರೀಯ ಮಟ್ಟದ ಐತಿಹಾಸಿಕ ವಾಹನಗಳ ಒಕ್ಕೂಟ ಮತ್ತು ಯನೆಸ್ಕೊ ಸಹಯೋಗದಲ್ಲಿ ಸೆ.30ರಿಂದ ಮೂರು ದಿನಗಳವರೆಗೆ ಪ್ರಾಚೀನ ಐತಿಹಾಸಿಕ ಕಾರ್ ಪ್ರದರ್ಶನವನ್ನು ಏರ್ಪಡಿಸಿರುವುದಾಗಿ ತಿಳಿಸಿದೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ರವಿ ಪ್ರಕಾಶ್ ಮಾತನಾಡಿ, ವಿಧಾನ ಸೌಧದ ಮುಂಭಾಗ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಲಿದ್ದು, ಸೆ.30ರಂದು ಬೆಂಗಳೂರಿನಿಂದ ಮಧ್ಯಾಹ್ನ 1ಗಂಟೆಗೆ ಲಲಿತ ಮಹಲ್ ತಲುಪಲಾಗುತ್ತದೆ. ಹಾಗೂ ಸಂಜೆ 6 ಗಂಟೆಗೆ ಮೈಸೂರು ಅರಮನೆ ಆವರಣದ ಮುಂಭಾಗದಲ್ಲಿ ಎಲ್ಲ ವಾಹನಗಳನ್ನು ನಿಲ್ಲಿಸಲಾಗುವುದು. ಅಲ್ಲದೆ, ಎರಡು ದಿನಗಳ ಕಾಲ ಮೈಸೂರಿನ ಪ್ರಮುಖ ಐತಿಹಾಸಿಕ ಸ್ಥಳಗಳ ವೀಕ್ಷಣೆ ಮತ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದರು.

ಉದಯಪುರ, ದುಂಗಾರಪುರ, ಜೈಪುರ, ಲಕ್ನೋದ ಮಹಾರಾಜರು ಪಾಲ್ಗೊಂಡು ಐತಿಹಾಸಿಕ ಕಾರುಗಳನ್ನು ಚಲಾಯಿಸಲಿದ್ದು, ಪ್ರದರ್ಶನದಲ್ಲಿ 12ವಿದೇಶಿ ಕಾರುಗಳು, ವಿವಿಧ ರಾಜ್ಯಗಳ 22 ಕಾರು, ಬೆಂಗಳೂರಿನ 16 ಕಾರುಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News