2017-18ರಲ್ಲಿ ಹಿಂದುಸ್ತಾನ್ ಏರೋನಾಟಿಕ್ಸ್ ನಿಂದ ದಾಖಲೆ ಮೊತ್ತದ ವಹಿವಾಟು

Update: 2018-09-29 07:43 GMT

ಬೆಂಗಳೂರು, ಸೆ.29: ‘ಹಿಂದುಸ್ತಾನ್ ಏರೋನಾಟಿಕ್ಸ್’ ಸಂಸ್ಥೆಯ ಉತ್ಪಾದನಾ ಸಾಮರ್ಥ್ಯವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಶ್ನಿಸಿದ ಕೆಲವೇ ದಿನಗಳಲ್ಲಿ ಈ ಸರಕಾರಿ ಸ್ವಾಮ್ಯದ ಸಂಸ್ಥೆ  2017-18 ಆರ್ಥಿಕ ವರ್ಷದಲ್ಲಿ ಗರಿಷ್ಠ ವಹಿವಾಟು 18,283.86 ಕೋಟಿ ರೂ. ದಾಖಲಿಸಿದೆ. ಕಳೆದ ವರ್ಷ ಸಂಸ್ಥೆಯ ಒಟ್ಟು ವಾರ್ಷಿಕ ವಹಿವಾಟಿನ ಮೊತ್ತ 17,603.79 ಕೋಟಿ  ರೂ. ಆಗಿತ್ತು.

ತಾನು ಸ್ಥಿರ ರೆಕ್ಕೆ ಹೊಂದಿದ ಸು-30 ಎಂಕೆಐ, ಎಲ್‍ಸಿಎ ತೇಜಸ್ ಹಾಗೂ ಡೋರ್ನಿಯರ್ ಡಿಒ-228 ಹಾಗೂ ತಿರುಗುವ ರೆಕ್ಕೆಗಳನ್ನು ಹೊಂದಿದ ಎಲ್‍ಎಚ್ ಧ್ರುವ್ ಹಾಗೂ ಚೀತಲ್ ಹೆಲಿಕಾಪ್ಟರುಗಳ ಸಹಿತ 40 ವಿಮಾನಗಳು ಹಾಗೂ ಹೆಲಿಕಾಪ್ಟರುಗಳನ್ನು ನಿರ್ಮಾಣಗೊಳಿಸಿರುವ ಬಗ್ಗೆ ಕಂಪೆನಿ ಹೇಳಿಕೊಂಡಿದೆ. ಇದರ ಹೊರತಾಗಿ 105 ಹೊಸ ಇಂಜಿನುಗಳು, 220 ವಿಮಾನಗಳು/ಹೆಲಿಕಾಪ್ಟರುಗಳ ಪುನರ್ ನಿರ್ಮಾಣ, 550 ಇಂಜಿನಿಗಳು ಹಾಗೂ 146 ಇತರ ಏರೋ-ಸ್ಟ್ರಕ್ಚರುಗಳನ್ನು ಬಾಹ್ಯಾಕಾಶ ಯೋಜನೆಗಳಿಗಾಗಿ ಇದೇ  ಅವಧಿಯಲ್ಲಿ ತಯಾರಿಸಿದ್ದಾಗಿ  ಸಂಸ್ಥೆ  ತನ್ನ ಲಿಸ್ಟಿಂಗ್ ನಂತರ ಹೊಸ ಎಚ್‍ಎಎಲ್ ಮ್ಯಾನೇಜ್ಮೆಂಟ್ ಅಕಾಡೆಮಿ ಕ್ಯಾಂಪಸ್ಸಿನಲ್ಲಿ ನಡೆದ  55ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ  ತಿಳಿಸಿದೆ.

ಒಟ್ಟು 126 ರಾಫೇಲ್ ಯುದ್ಧ ವಿಮಾನಗಳ ಒಪ್ಪಂದ ಮುರಿಯಲು ಎಚ್‍ಎಎಲ್ ಈ ನಿಟ್ಟಿನಲ್ಲಿ ಸೂಕ್ತ ಸಾಮರ್ಥ್ಯ ಹೊಂದಿಲ್ಲ ಎಂದು  ರಕ್ಷಣಾ ಸಚಿವೆ  ಹೇಳಿದ್ದರೆ, 100 ಮಾನವ ಗಂಟೆಗಳಲ್ಲಿ ಮಾಡಬಲ್ಲ ಕೆಲಸಕ್ಕೆ ಎಚ್‍ಎಎಲ್ ಎರಡು ಪಟ್ಟು ಅಧಿಕ ಮಾನವ ಗಂಟೆಗಳು ಬೇಕೆಂದು ಫ್ರೆಂಚ್ ಸಂಸ್ಥೆ ಡಸ್ಸಾಲ್ಟ್‍ಗೆ ಹೇಳಿತ್ತೆಂದೂ ಕೇಂದ್ರ ಸಚಿವ ಬಾಬು ಸುಪ್ರಿಯೊ ಕೂಡ ಗುರುವಾರ ಹೇಳಿದ್ದರು.

ಎಚ್‍ಎಎಲ್ ಹೊಸ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಆರ್. ಮಾಧವನ್ ತಮ್ಮ ಭಾಷಣದಲ್ಲಿ ಕಂಪೆನಿ ಹಲವಾರು ಸವಾಲುಗಳ ಹೊರತಾಗಿಯೂ ಉತ್ತಮ ಆದಾಯ ಮತ್ತು ಲಾಭ ಗಳಿಸಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News